ಇದೊಂದು ಕಿತ್ತೋಗಿರೋ ಪ್ರೋಗ್ರಾಂ ಎಂದು ಹೇಳುವ ಮೂಲಕ ಬಿಗ್ ಬಾಸ್ ಶೋ ಬಗ್ಗೆ ವಕೀಲ ಜಗದೀಶ್ ನಾಲಿಗೆ ಹರಿಬಿಟ್ಟಿದ್ದಾರೆ.
ಬಿಗ್ ಬಾಸ್ಗೆ ಬನ್ನಿ ಅಂತ ನೀವೇ ನನ್ನ ಬಳಿ ಮನವಿ ಮಾಡಿದ್ದು. ನಾನು ಬಂದು ನಿಮ್ಮನ್ನು ಕೇಳಿಲ್ಲ. ಬಿಗ್ ಬಾಸ್ಗೆ ಬಂದು ನಾನು ಹೆಸರು ಮಾಡಬೇಕಿಲ್ಲ. ನನ್ನಲ್ಲಿ ಎಷ್ಟು ಕೂದಲು ಇದೆಯೋ ಅಷ್ಟು ಲಕ್ಷ ರೂಪಾಯಿ ಹಣ ನಾನು ನೋಡಿದ್ದೇನೆ.
ಪ್ರತಿ ತಿಂಗಳು ನಮ್ಮ ಮನೆಯ ನಾಯಿಗೆ ನಾನು ಒಂದು ಲಕ್ಷ ರೂಪಾಯಿ ಖರ್ಚು ಮಾಡುತ್ತೇನೆ. ಆದರೆ ದೌಲತ್ತು ತೋರಿಸಿಲ್ಲ. ಜನರ ನಡುವೆ ಒಬ್ಬನಾಗಿ ಇರೋಕೆ ಇಷ್ಟಪಟ್ಟಿದ್ದೇನೆ. ಆದರೆ ಈ ಜನರು ನನಗೆ ಹೋಗಲೇ ಅಂದರು. ನಾನು ಇಂದಲ್ಲಾ ನಾಳೆ ಸಿಎಂ ಆಗುವವನು. ನನ್ನನ್ನು ತಡೆಯೋಕೆ ಆಗಲ್ಲ’ ಎಂದು ಲಾಯರ್ ಜಗದೀಶ್ ಹೇಳಿದ್ದಾರೆ.
ನಾನೊಬ್ಬ ರಿಯಲ್ ಹೀರೋ. ಯಾವನನ್ನೂ ಬಿಟ್ಟಿಲ್ಲ. ನಾನು ಸಿಂಹ. ಗುಂಪಲ್ಲಿ ಇರೋಕೆ ನಾನು ತೋಳ ಅಲ್ಲ. ನಿಮ್ಮ ಶೋ ನೀವೇ ಮಾಡಿಕೊಳ್ಳಿ. ನನ್ನ ಘನತೆ ಗೌರವ ನನಗೆ ಆಚೆ ಕಡೆ ಇದೆ. ನನ್ನನ್ನು ಹೊರಗೆ ಹಾಕಿ. ನಾನು ಆಟ ಮುಗಿಸುತ್ತೇನೆ. ಕಿತ್ತೋಗಿರೋ 50 ಲಕ್ಷ ಗೆಲ್ಲೋಕೆ ಈ ಕಿತ್ತೋಗಿರೋ ಪ್ರೋಗ್ರಾಂ ಮಾಡಿಕೊಂಡಿದ್ದೀರಿ. ಒಬ್ಬರ ಮೇಲೆ ಇನ್ನೊಬ್ಬರು ಕಿತ್ತಾಡಿಕೊಂಡಿದ್ದೀರಿ. ನಾನು ಮನಸ್ಸ ಮಾಡಿದರೆ ಹೆಲಿಕಾಪ್ಟರ್ ತರಿಸುತ್ತೇನೆ. ನಾನು ಯಾರು ಎಂಬುದು ನಿಮಗೆ ಗೊತ್ತಿಲ್ಲ. ನಿಮ್ಮ ಪ್ರೋಗ್ರಾಂ ಹಾಳು ಮಾಡುತ್ತೇನೆ’ ಎಂದಿದ್ದಾರೆ ಲಾಯರ್ ಜಗದೀಶ್.
ನೀವು ನಡೆಸುವ ಮಾಫಿಯಾ, ಅವರು ನಡೆಸುವ ಮಾಫಿಯಾವನ್ನು ನಾನು ಎಕ್ಸ್ಪೋಸ್ ಮಾಡುತ್ತೇನೆ. ನನಗೆ ಇಲ್ಲಿಇರೋಕೆ ಇಷ್ಟ ಇಲ್ಲ. ಧನ್ಯವಾದಗಳು.. ನಾನು ಹೊರಡುತೇನೆ. ದುಡ್ಡು ಕೊಟ್ಟು ಬಿಗ್ ಬಾಸ್ ಕೊಂಡುಕೊಳ್ಳಬಹುದು’ ಎಂದು ಲಾಯರ್ ಜಗದೀಶ್ ಹೇಳಿದ್ದಾರೆ.