ಬೆಂಗಳೂರು : ಮುಸ್ಲಿಂ ಸ್ಪೀಕರ್ಗೆ ಬಿಜೆಪಿಯವರೂ ನಮಸ್ಕರಿಸುತ್ತಾರೆ ಎಂಬ ಸಚಿವ ಬಿ.ಝಡ್. ಜಮೀರ್ ಅಹ್ಮದ್ ಖಾನ್ ಹೇಳಿಕೆಗೆ ಮಾಜಿ ಶಾಸಕ ಎಂ.ಪಿ ರೇಣುಕಾಚಾರ್ಯ ಕಿಡಿಕಾರಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಒಂದು ಧರ್ಮಕ್ಕೆ ತಲೆಬಾಗಬೇಕು ಅಂದರೆ ಮುಸ್ಲಿಂರಿಗೆ ತಲೆಬಾಗಬೇಕಾ? ಸಚಿವ ಜಮೀರ್ ಅಹಮ್ಮದ್ ಖಾನ್ ಹೇಳಿಕೆ ಹುಚ್ಚು ಹಾಗೂ ವಿಕೃತ ಹೇಳಿಕೆ ಎಂದು ಕುಟುಕಿದ್ದಾರೆ.
Advertisement
ಹಿಂದೂ ಹಾಗೂ ಮುಸ್ಲಿಮರು ಸೌಹಾರ್ದಯುತವಾಗಿ ಬದುಕಬೇಕು. ನಿಮ್ಮ ಬಾಯಲ್ಲಿ ಬರುವ ಮಾತಿಂದ ಕೋಮು ಘರ್ಷಣೆಗಳು ಆಗ್ತಿವೆ. ಎಲುಬಿಲ್ಲದೇ ನಾಲಿಗೆಯಂತೆ ಏನೇನೋ ಮಾತನಾಡೋದಲ್ಲ. ಯು.ಟಿ. ಖಾದರ್ ಅವರಿಗೆ ನಾವು ತಲೆಬಾಗಲ್ಲ, ಯು.ಟಿ. ಖಾದರ್ ಇದನ್ನು ಖಂಡಿಸಬೇಕು. ಸಚಿವ ಜಮೀರ್ ಅಹ್ಮದ್ ಖಾನ್ ಈ ನಾಡಿನ ಜನರಲ್ಲಿ ಕ್ಷಮಾಪಣೆ ಕೋರಬೇಕು ಎಂದು ಒತ್ತಾಯಿಸಿದ್ದಾರೆ.