HomeGadag Newsಜಗದಂಬಾ ಸರಸ್ವತಿಯವರು ಮಾಹಾನ್ ತಪಸ್ವಿ

ಜಗದಂಬಾ ಸರಸ್ವತಿಯವರು ಮಾಹಾನ್ ತಪಸ್ವಿ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ: ವಿಶಾಲ ಹೃದಯದ, ಸಹನಾ ಮೂರ್ತಿಯಾಗಿದ್ದ ಜಗದಂಬಾ ಸರಸ್ವತಿಯವರು ಓಂ ಮಂಡಳಿ ಸ್ಥಾಪನೆ ಮಾಡುವುದರ ಮೂಲಕ ಇಂದಿನ ಬ್ರಹ್ಮಕುಮಾರಿಯರಿಗೆ ದಾರಿ ದೀಪವಾಗಿದ್ದಾರೆ ಎಂದು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಧಾರವಾಡ ವಿಭಾಗದ ಸಂಚಾಲಕರಾದ ಬಿ.ಕೆ. ಜಯಂತಿ ಅಕ್ಕನವರು ಹೇಳಿದರು.

ಇಲ್ಲಿಯ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಶಾಖೆಯಲ್ಲಿ ಶಿವ ಪಾರ್ವತಿ ಯೋಗ ಫೌಂಡೇಶನ್, ಅನ್ನಪೂರ್ಣೇಶ್ವರಿ ಸತ್ಸಂಗ ಸಮಿತಿಯ ಸಂಯುಕ್ತ ಆಶ್ರಯದಲ್ಲಿ ನಡೆದ ಓಂ ಮಂಡಳಿ ಸ್ಥಾಪಕಿ ಜಗದಂಬಾ ಸರಸ್ವತಿಯವರ 61ನೇ ಸ್ಮೃರ್ತಿ ದಿನ ಹಾಗೂ ಯೋಗ ಶಿಬಿರ ಸಮಾರೋಪದ ಸಾನ್ನಿಧ್ಯ ವಹಿಸಿ ಮಾತನಾಡುತ್ತಿದರು.

ಇಂದು ಪ್ರಪಂಚದಾದ್ಯಂತ 45 ಸಾವಿರ ಬ್ರಹ್ಮಕುಮಾರಿಯವರು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಂಸ್ಥೆಯಲ್ಲಿ ಆಧ್ಯಾತ್ಮಿಕ ಪ್ರವಚನವನ್ನು ನೀಡುತ್ತಿದ್ದಾರೆ. ತಮ್ಮ 15ನೇ ವಯಸ್ಸಿನಲ್ಲಿ ಯಜ್ಞಕ್ಕೆ ಪಾದರ್ಪಣೆ ಮಾಡಿದ ಜಗದಂಬಾ ಅವರು ಕಡಿಮೆ ಅವಧಿಯಲ್ಲಿ ಹೆಚ್ಚಿನ ಪರುಷಾರ್ಥ ಸಾಧಿಸಿದರು. ಮಾಹಾನ್ ತಪಸ್ವಿಯಾಗಿದ್ದ ಅವರು ಪ್ರತಿ ಕ್ಷಣ ಅಂತಿಮ ಕ್ಷಣವೆಂದು ಜೀವನ ನಡೆಸಿದವರು ಎಂದರು.

ಯೋಗ ಸಾಧಕ, ತರಬೇತುದಾರ ಸಿದ್ದಣ್ಣ ಜವಳಿ ಮಾತನಾಡಿ, ಯೋಗವು ಭೋದನೆಯ ವಿಜ್ಞಾನ ಅಲ್ಲ. ಸಾಧನೆ ವಿಜ್ಞಾನವಾಗಿದ್ದು, ಔಷಧಿರಹಿತ ಚಿಕಿತ್ಸೆಯಾಗಿದೆ. ನಿರಂತರ ಸಾಧನೆಯಿಂದ ಈಗ ಜಗತ್ತಿನಲ್ಲಿ ಅತಿಯಾಗಿ ದುಷ್ಟಪರಿಣಾಮ ಬೀರುತ್ತಿರುವ ರಕ್ತದೊತ್ತಡ, ಮಧುಮೇಹ, ಥ್ಯೆರಾಯ್ಡ ರೋಗವನ್ನು ಗುಣಪಡಿಸಬಹುದಾಗಿದೆ. ದೇಹ ಒಂದು ತಾಮ್ರದ ಪಾತ್ರೆಯಾಗಿದ್ದು, ಯೋಗ ಸಾಧನೆಯಿಂದ ನಿತ್ಯ ತೊಳೆದರೆ ಪರಮಾತ್ಮನ ಪ್ರೀತಿಗೆ ಪಾತ್ರರಾಗುತ್ತೇವೆ ಎಂದರು.

ಇದೇ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ ಹಾಗೂ ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ ಶೇ.85ರಷ್ಟು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಶಾಖೆಯ ಸಂಚಾಲಕಿ ಬಿ.ಕೆ. ಸರೋಜಕ್ಕ ಅವರು ಸ್ವಾಗತಿಸಿದರು. ನಿವೃತ್ತ ಪ್ರಾಚಾರ್ಯ ಆರ್.ಎನ್. ಗೌಡರ ನಿರೂಪಿಸಿ ವಂದಿಸಿದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!