ವಿಜಯಸಾಕ್ಷಿ ಸುದ್ದಿ, ಗದಗ : ಇಲ್ಲಿನ ಡಿ.ಎಚ್. ಕಬಾಡಿ ಕಟ್ಟಡದಲ್ಲಿನ ಶ್ರದ್ಧಾ ಸ್ವರ ಸಂಗೀತ ವೆಲ್ಫೇರ್ ಟ್ರಸ್ಟ್ ಸಂಗೀತ ವಿದ್ಯಾಲಯದಲ್ಲಿ ಶ್ರೀ ಜಗಜ್ಯೋತಿ ಬಸವೇಶ್ವರ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಸಭೆಯ ಅಧ್ಯಕ್ಷತೆಯನ್ನು ನಿವೃತ್ತ ಶಿಕ್ಷಕ ಎಂ.ಎಸ್. ಚಿನ್ನೂರ ವಹಿಸಿ ಬಸವಣ್ಣನವರ ಕುರಿತಾಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಗೀತ ವಿದ್ವಾಂಸ ಪಂ. ವೆಂಕಟೇಶ್ ಅಲ್ಕೋಡ್ ಕಾರ್ಯಕ್ರಮ ನಡೆಸಿಕೊಟ್ಟರು. ಸಂಗೀತ ವಿದ್ಯಾಲಯದ ಮಕ್ಕಳು, ಹೇಮಾ ಅಲ್ಕೋಡ ಬಸವಣ್ಣನವರ ವಚನಗಳನ್ನು ಹಾಡಿದರು. ಟ್ರಸ್ಟಿ ಅಧ್ಯಕ್ಷ ಉಜ್ವಲ್ ಕಬಾಡಿ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾರ್ಯಾಧ್ಯಕ್ಷೆ ಜ್ಯೋತಿ ಉ.ಕಬಾಡಿ, ಸಂಗೀತ ಶಿಕ್ಷಕ ಪರಸಪ್ಪ ಭಜಂತ್ರಿ, ಬಸವದಳದ ಸದಸ್ಯರಾದ ಎಸ್.ಎ. ಮುಗದ, ಸರೋಜಾ ಎಸ್.ಮುಗದ, ಮಾರುತಿ ಬಂಡಿವಡ್ಡರ, ಸಂಜೀವಿನಿ ಬಂಡಿವಡ್ಡರ ಮುಂತಾದವರು ಉಪಸ್ಥಿತರಿದ್ದರು.



