‘ಬಿಗ್ ಬಾಸ್ ಕನ್ನಡ ಸೀಸನ್ 11’ರ ಮೊದಲ ಎಲಿಮಿನೇಷನ್ ನಡೆದಿದೆ. ಯಮುನಾ ಶ್ರೀನಿಧಿ ಮೊದಲ ವಾರವೇ ಎಲಿಮಿನೇಟ್ ಆಗಿದ್ದಾರೆ. ಇದಕ್ಕೆ ಅವರು ಬೇಸರಗೊಂಡಿದ್ದಾರೆ. ಚೈತ್ರಾ ಹಾಗೂ ಜಗದೀಶ್ ಇಬ್ಬರೂ ನಾಮಿನೇಟ್ ಆಗಿದ್ದರು, ಅವರು ಸೇವ್ ಆಗಿದ್ದಾರೆ. ಜಗದೀಶ್ ಅವರು ಬಿಗ್ ಬಾಸ್ ಮನೆಯಲ್ಲಿ ಎಲ್ಲರ ವಿರುದ್ಧ ತಿರುಗಿ ಬಿದ್ದಿದ್ದರು. ಅವರು ಸಾಕಷ್ಟು ಕಿತ್ತಾಟ ಮಾಡಿದ್ದರು. ಎಲ್ಲಾ ಸ್ಪರ್ಧಿಗಳ ವಿರುದ್ಧ ತೊಡೆತಟ್ಟಿದ್ದರು. ಇದನ್ನು ಕಲರ್ಸ್ ಕನ್ನಡ ವಾಹಿನಿ ಮೀಮ್ ರೀತಿಯ ವಿಡಿಯೋ ಮಾಡಿ ವೀಕೆಂಡ್ನಲ್ಲಿ ಪ್ರಸಾರ ಮಾಡಿತ್ತು.
ಇದರ ಬೆನ್ನಲ್ಲೇ ಜಗದೀಶ್ ಅವರು ಹಂಸಗೆ “ಐ ಲವ್ ಯು ಕ್ಯಾಪ್ಟನ್. ನನಗೆ ಗೋಬಿ ಮಂಚೂರಿ ಬೇಕು, ಗೋಬಿ ಮಂಚೂರಿ ಇಲ್ಲ ಅಂದ್ರೆ ನಿನ್ನನ್ನೇ ಮಂಚೂರಿ ಮಾಡ್ಕೊಂಡು ತಿಂತೀನಿ” ಎಂದಿದ್ದಾನೆ. ಇನ್ನೊಂದು ಕಡೆ ಜಗದೀಶ್ ಅವರು ನೆಲದ ಮೇಲೆ ಮಲಗಿದ್ದಾರೆ. ಹಂಸ ಅವರು ‘ಮುಂಗಾರುಮಳೆ’ ಸಿನಿಮಾದ ಪೂಜಾ ಗಾಂಧಿ ಥರ ಜಗದೀಶ್ ಎದೆ ಮೇಲೆ ಕಾಲಿಟ್ಟು ನಡೆದಿದ್ದಾರೆ.
ಇದನ್ನೆಲ್ಲ ನೋಡಿ ಉಳಿದ ಸ್ಪರ್ಧಿಗಳು ಫುಲ್ ರೇಗಿಸಿಕೊಂಡು, ನಗಾಡಿದ್ದಾರೆ. ಇನ್ನು ಜಗದೀಶ್ ಅವರು “ನಾನು ಇರೋದಿಕ್ಕೆ ನಿಮಗೆ ಊಟ ಸೇರುತ್ತಿಲ್ಲ” ಅಂತ ಫ್ಲರ್ಟ್ ಮಾಡಿದಾಗ ಹಂಸ ಅವರು “ನನಗೂ ಇಲ್ಲಿ ಟೈಮ್ ಪಾಸ್ ಆಗ್ತಿಲ್ಲ” ಎಂದು ತಮಾಷೆಯಾಗಿ ಮಾತನಾಡಿದ್ದಾರೆ. ಇನ್ನೊಂದು ಕಡೆ ‘ಮೋಸ ಮಾಡಿ ಕ್ಯಾಪ್ಟನ್ ಆದೆಯಾ’ ಅಂತಲೂ ಹಂಸಗೆ ಅವರು ಟಾಂಗ್ ಕೊಟ್ಟಿದ್ದಾರೆ. ಹಂಸ ಮತ್ತು ಜಗದೀಶ್ ಜಗಳ ನೋಡುಗರಿಗೆ ಮಜಾ ಕೊಡುತ್ತಿದೆ. ಮನೆ ಸದಸ್ಯರಿಗೂ ಇದು ಖುಷಿಕೊಡುತ್ತಿದೆ.