ವಿಜಯಸಾಕ್ಷಿ ಸುದ್ದಿ, ಮುಳಗುಂದ: ಮನುಕುಲಕ್ಕೆ ಧರ್ಮದ ಬೋಧನೆ, ಧರ್ಮದ ಬಗ್ಗೆ ಜಾಗೃತಿ ಮೂಡಿಸುತ್ತಿರುವ ಜೈನ ಸಮಾಜ ಭಾರತೀಯ ಶಾಂತಿ-ಸಂಸ್ಕೃತಿಯ ಪ್ರತೀಕವಾಗಿದೆ ಎಂದು ಆರ್.ಎನ್. ದೇಶಪಾಂಡೆ ಸರಕಾರಿ ಪ್ರಥಮದರ್ಜೆ ಕಾಲೇಜು ಪ್ರಾಚಾರ್ಯ ಆರ್.ಎಂ. ಕಲ್ಲನಗೌಡರ ಹೇಳಿದರು.
ಪಟ್ಟಣದ ನಾಗರಾಜ ದೇಶಪಾಂಡೆ ಅವರ ವಾಡೆಯಲ್ಲಿ ಗದಗ ಜಿಲ್ಲಾ ದಿಗಂಬರ ಜೈನ ಸಂಘದ ಸಂಯುಕ್ತ ಆಶ್ರಯದಲ್ಲಿ ದಶಲಕ್ಷಣ ಪರ್ವ ಕಾರ್ಯಕ್ರಮದಲ್ಲಿ ಭಗವಾನ ಮಾಹಾವೀರರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿ ಮಾತನಾಡಿದ ಅವರು, ಪ್ರತಿಯೊಬ್ಬ ಮನುಷ್ಯನಿಗೆ ಧರ್ಮಬೇಕು, ಧರ್ಮವಿಲ್ಲದ ಬದುಕು ಅಸಾಧ್ಯ. ಮನುಷ್ಯ ಇಂದು ಧರ್ಮ ಬಿಟ್ಟು ನಡೆಯುತ್ತಿದ್ದಾನೆ. ಪ್ರತಿಯೊಂದು ಧರ್ಮದಲ್ಲಿನ ದಾರ್ಶನಿಕರು ಧರ್ಮದ ದಾರಿಯಲ್ಲಿ ನಡೆದವರು, ಬೇರೆ ಧರ್ಮದ ಬಗ್ಗೆ ತಿಳಿದುಕೊಂಡವರು, ಪ್ರತಿ ಧರ್ಮವನ್ನು ಪ್ರೀತಿಸಿದವರು. ಜೈನ ಧರ್ಮವು 6ನೇ ಶತಮಾನದಿಂದಲೂ ಧರ್ಮದಿಂದ, ಶಾಂತಿ, ಅಹಿಂಸಾ ತತ್ವ ಪರಿಪಾಲಿಸಿದವರು ಎಂದರು.
ನಾಗರಾಜ ದೇಶಪಾಂಡೆ ಅಧ್ಯಕ್ಷತೆ ವಹಿಸಿದ್ದರು. ಎಸ್.ಸಿ. ಬಡ್ನಿ, ಬಿ.ವಿ. ಸುಂಕಾಪೂರ ಹಾಗೂ ಜೈನ ಸಮಾಜದ ಮುಖಂಡರು ಇದ್ದರು.



