ಮೈಸೂರು: ನನ್ನ ಮತ್ತು ಜಮೀರ್ ಆತ್ಮೀಯತೆ ರಾಜಕೀಯವಾಗಿ ಮಾತ್ರ. ನಾನು ಅವರನ್ನು ಕುಳ್ಳ ಎಂದಿಲ್ಲ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು. ಚಾಮುಂಡಿ ಬೆಟ್ಟದಲ್ಲಿ ಮಾಧ್ಯಮಗಳೊಂದಿಗೆ ಅವರು ಮಾತನಾಡಿದ ಅವರು, ಇಂತಹ ಹೇಳಿಕೆಯನ್ನು ಅಮಾಯಕರು ಕೊಟ್ಟರೆ ಜೈಲಿಗೆ ಕಳಿಹಿಸುತ್ತಾರೆ.
ಇದನ್ನು ಸಹ ಎಸ್ಐಟಿಗೆ ಕೊಡಲಿ. ಯಾವ ಸಮಯದಲ್ಲಿ ಯಾರ ಕಾಲು ಹಿಡಿದಿದ್ದರು, ಇವರೆಲ್ಲಾ ಎಲ್ಲಿದ್ದರು ಎಂದು ನನಗೆ ಗೊತ್ತಿಲ್ವಾ. ಚೆಲುವ ಅಂತ ಕರೆದಿಲ್ವಾ ಅಂತಾರೆ. ಇದು ಅವರ ಕಲ್ಚರ್ ತೋರಿಸುತ್ತದೆ. ನಾನು ಕುಳ್ಳ ಎಂದು ಇಡೀ ಜೀವಮಾನದಲ್ಲಿ ಕರೆದಿಲ್ಲ ಎಂದರು.
ಇನ್ನೂ ಚನ್ನಪಟ್ಟಣದಲ್ಲಿ ಜನತೆಯ ಆಶೀರ್ವಾದ ಆಗಿದೆ. ಉತ್ತಮವಾದ ರೀತಿಯಲ್ಲಿ ಗೆಲ್ಲುತ್ತೇವೆ. ರಾಜಕೀಯವಾಗಿ ಏನು ನಡೆದಿದೆ ಎಂಬುದನ್ನು ಯೋಗೇಶ್ವರ್ ವಿಮರ್ಶೆ ಮಾಡಿದ್ದಾರೆ. ಜಮೀರ್ ಹೇಳಿಕೆಯಿಂದ ಏನು ವ್ಯತ್ಯಾಸ ಆಗಿಲ್ಲ. ನಾವು ಚನ್ನಪಟ್ಟಣ ಕ್ಷೇತ್ರದಲ್ಲಿ ಗೆಲ್ಲುತ್ತೇವೆ ಎಂದು ಕುಮಾರಸ್ವಾಮಿ ಹೇಳಿದರು.