ಜಮುನಾರಿಗೆ `ಕರ್ನಾಟಕ ಪ್ರೈಡ್ ಬಿಸಿನೆಸ್’ ಅವಾರ್ಡ್

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಭಾರತದ ಯಶಸ್ವಿ ಉದ್ಯಮಿ ದಿ. ರತನ್ ಟಾಟಾ ಅವರ ಸ್ಮರಣಾರ್ಥವಾಗಿ ರಾಜ್ ನ್ಯೂಸ್ ಕನ್ನಡ ಹಾಗೂ ರಾಜ್ ಮ್ಯೂಸಿಕ್ ಕನ್ನಡ ಸಹಭಾಗಿತ್ವದಲ್ಲಿ ಕರ್ನಾಟಕ ಪ್ರೈಡ್ ಬಿಸಿನೆಸ್ ಅವಾರ್ಡ್-2024ಅನ್ನು ನೀಡಲಾಯಿತು.

Advertisement

ಬೆಳಗಾವಿ ಜಿಲ್ಲೆಯ ರಾಮದುರ್ಗ ಪಟ್ಟಣ ಉದ್ಯಮಿ ಪ್ರದೀಪ್ ಕುಮಾರ್ ಪಟ್ಟಣ ಅವರ ಧರ್ಮಪತ್ನಿ ಜಮುನಾ ಪಿ.ಪಟ್ಟಣ ಅವರಿಗೆ ಕರ್ನಾಟಕ ಪ್ರೈಡ್ ಬಿಸಿನೆಸ್ ಅವಾರ್ಡ್-2024ನ್ನು ವಿಧಾನಸಭೆಯ ಅಧ್ಯಕ್ಷರಾದ ಯು.ಟಿ. ಖಾದರ್ ಅವರು ನೀಡಿ ಗೌರವಿಸಿದರು.

ವಿಧಾನಸಭೆ ಮುಖ್ಯ ಸಚೇತಕರಾದ ಅಶೋಕ್ ಮಹದೇವಪ್ಪ ಪಟ್ಟಣ, ವಾಹಿನಿಯ ಪದಾಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು.


Spread the love

LEAVE A REPLY

Please enter your comment!
Please enter your name here