ವಿಜಯಸಾಕ್ಷಿ ಸುದ್ದಿ, ಗದಗ : ಕೊಪ್ಪಳ ಜಿಲ್ಲೆಯ ಅಳವಂಡಿ ಹೋಬಳಿ ಪತ್ರಕರ್ತರು, ಶ್ರೀ ಸಿದ್ಧೇಶ್ವರ ಸಂಯುಕ್ತ ಪದವಿಪೂರ್ವ ಮಹಾವಿದ್ಯಾಲಯ ಮತ್ತು ರಾಷ್ಟ್ರೀಯ ಸೇವಾ ಯೋಜನ ಘಟಕ ಅಳವಂಡಿ ಇವರುಗಳ ಸಂಯುಕ್ತ ಆಶ್ರಯದಲ್ಲಿ ಅಳವಂಡಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭದಲ್ಲಿ ಮುಂಡರಗಿ ತಾಲೂಕಿನ ಜಂತಲಿ ಶಿರೂರು ಗ್ರಾಮದ ಗವಿಶಿದ್ಧಯ್ಯ ಹಳ್ಳಿಕೇರಿಮಠ ಅವರ ಜನಪದ ಕ್ಷೇತ್ರದಲ್ಲಿನ ಸೇವೆಯನ್ನು ಪರಿಗಣಿಸಿ `ಜನಪದ ಸಿರಿ’ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಈ ಸಂದರ್ಭದಲ್ಲಿ ಶ್ರೀ ಷ.ಬ್ರ. 108 ಶ್ರೀ ಮರುಳಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು, ಕ.ವಿ.ಸಮಿತಿಯ ಮ್ಯಾನೇಜರ್ ಶಿವಪ್ರಕಾಶಸ್ವಾಮಿ ಇನಾಮದಾರ, ಅಳವಂಡಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶಂಕ್ರಮ್ಮ ಜೋಗಿನ, ಕೊಪ್ಪಳದ ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಶಂಕ್ರಯ್ಯ, ಎಸ್.ಎಸ್ ಪಿಯು ಕಾಲೇಜಿನ ಪ್ರಾಚಾರ್ಯ ಚಂದ್ರಶೇಖರ ದೊಡ್ಡಮನಿ, ಪತ್ರಕರ್ತರಾದ ಸುರೇಶ ಸಂಗರೆಡ್ಡಿ, ಡಾ. ಬಿ.ಎನ್. ಹೊರಪೇಟಿ, ಜೂನಸಾಬ್ ವಡ್ಡಟ್ಟಿ, ಅನ್ವರ್ ಹುಸೇನ ಗಡಾದ, ಗುರುಬಸವರಾಜ ಹಳ್ಳಿಕೇರಿ, ಚೌಡಪ್ಪ ಜಂತ್ಲಿ, ಶಿಕ್ಷಣ ಪ್ರೇಮಿ ಸಂಜೀವ ಕಲ್ಗುಡಿ, ಸಾಹಿತಿ ಷಣ್ಮುಖಯ್ಯ ತೋಟದ, ಹನುಮಂತ ಲಮಾಣಿ ಮುಂತಾದವರಿದ್ದರು.