ಜನವಾಣಿಯೇ ಬೇರು, ಕವಿವಾಣಿಯೇ ಹೂವು

0
Janapada Utsav-2024 programme
Spread the love

ವಿಜಯಸಾಕ್ಷಿ ಸುದ್ದಿ, ಗದಗ : ಯಾವುದೇ ನಾಡಿನ ರಾಷ್ಟ್ರದ ಸಾಹಿತ್ಯದ ಉದಯಕ್ಕೆ ಮೂಲ ಜಾನಪದ ಸಾಹಿತ್ಯ. ಅದು ಒಂದು ಜನಾಂಗದ ಜೀವಾಳ ಮಾತ್ರವಲ್ಲ, ಸಂಸ್ಕೃತಿಯ ಜೀವಾಳವೂ ಹೌದು. ಓದು ಬರಹ ಬಾರದ ಗ್ರಾಮೀಣ ಸಮುದಾಯ ಶ್ರಮಿಕ ವರ್ಗದ ಶ್ರೀಸಾಮಾನ್ಯರಿಂದ ರಚಿತವಾದ ಅಮರ ಸಾಹಿತ್ಯವೇ ಜನಪದ ಸಾಹಿತ್ಯ. ಇದು ತಲೆಮಾರಿನಿಂದ ತಲೆಮಾರಿಗೆ ಹರಿದು ಬರುವಂತದ್ದು ಎಂದು ರಾಜಶೇಖರಯ್ಯ ಹಿರೇಮಠ ಅಭಿಪ್ರಾಯಪಟ್ಟರು.

Advertisement

ತಾಲೂಕಿನ ಎಚ್.ಎಸ್. ವೆಂಕಟಾಪೂರ ಗ್ರಾಮದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಸಾಂಸ್ಕೃತಿಕ ಕಲಾ ಸಂಸ್ಥೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಬೆಂಗಳೂರು ಇವರ ಆಶ್ರಯದಲ್ಲಿ ನಡೆದ ಜನಪದ ಉತ್ಸವ-2024 ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಪ್ರಕಾಶ ಬೆಂತೂರ, ಆರ್.ವ್ಹಿ. ಬೆಳಹುಣಸಿ, ನಿಂಗಪ್ಪ ದೇಸಾಯಿ, ಸತೀಶ ಹೆಗಡಿಕಟ್ಟಿ, ರವಿ ಬೆಂತೂರ, ಆರ್.ಇ.ಸಿ. ಹುಲಕೋಟಿ, ವಿವೇಕ ಲಕ್ಕಣ್ಣವರ, ಬಸಯ್ಯ ಹಿರೇಮಠ ಪಾಲ್ಗೊಂಡಿದ್ದರು.

ಕಾರ್ಯಕ್ರಮದಲ್ಲಿ ಶಿಲ್ಪಾ ಕುರಹಟ್ಟಿ ತಂಡದವರಿಂದ ಸುಗಮ ಸಂಗೀತ, ನಿಂಗಪ್ಪ ಗುಡ್ಡದ ತಂಡದವರಿಂದ ಡೊಳ್ಳಿನ ಪದ, ಸಾವಿತ್ರಿ ಲಮಾಣಿ ಇವರಿಂದ ಜನಪದ ಗೀತೆ, ಚಿದಾನಂದ ಅನವಾಳ ತಂಡದವರಿಂದ ಭಜನೆ, ಶಿ ರೂಪಾಬಾಯಿ ದಡೆದ ಹಾಗೂ ತಂಡದವರಿಂದ ಜನಪದ ನೃತ್ಯ, ಪ್ರಕಾಶ ಕುರುಬರ ತಂಡದವರಿಂದ ಡೊಳ್ಳು ಕುಣಿತ, ರೇಣವ್ವ ಗೋಶಲ್ಯನವರ ತಂಡದವರಿಂದ ಸೋಬಾನ ಪದ, ಬಸಪ್ಪ ಈರಣ್ಣವರ ತಂಡದವರಿಂದ ತತ್ವಪದ, ಬಸಪ್ಪ ಅಡವಳ್ಳಿ ತಂಡದವರಿಂದ ವಚನ ಸಂಗೀತ, ಮಲ್ಲಪ್ಪ ಗೋಶಲ್ಯನವರ ತಂಡದವರಿಂದ ಕೋಲಾಟ, ಮೈಲಾರಪ್ಪ ಹರಿಜನ ತಂಡದವರಿಂದ ಜನಪದ ಗೀತೆಗಳು, ಪ್ರಕಾಶ ಚಂದನ್ನವರ ತಂಡದವರಿಂದ ಜೋಗತಿ ನೃತ್ಯ, ಸೋಮಶೇಖರಯ್ಯ ಚಿಕ್ಕಮಠ ತಂಡದವರಿಂದ ಲಂಬಾಣಿ ನೃತ್ಯ, ಷಡಕ್ಷರಯ್ಯ ಬದ್ನಿಮಠ ತಂಡದವರಿಂದ ತತ್ವಪದಗಳು ನೆರೆದಿದ್ದ ಜನರನ್ನು ರಂಜಿಸಿದವು.

ಎಮ್.ಎಚ್. ಹುಲ್ಲೂರ ಕಾರ್ಯಕ್ರಮ ನಿರೂಪಿಸಿದರು. ಕಲಾ ಸಂಸ್ಥೆಯ ಅಧ್ಯಕ್ಷ ಗೌಡಪ್ಪ ವೆಂ.ಬೊಮ್ಮಪ್ಪನವರ ವಂದಿಸಿದರು.

ಗ್ರಾಮೀಣ ಪ್ರದೇಶಗಳಲ್ಲಿ ಜನಪದ ಕಲೆಗಳು ಜನರೊಂದಿಗೆ ಬೆರೆತು ಹಾಸುಹೊಕ್ಕಾಗಿವೆ. ಇಂತಹ ಕಲೆಗಳು ಇಂದು ಪಟ್ಟಣ, ಪೇಟೆ ಪ್ರದೇಶಗಳಲ್ಲಿ ಕಣ್ಮೆರೆಯಾಗುತ್ತಿರುವುದು ಅತ್ಯಂತ ಖೇದಕರ ಸಂಗತಿ. ಇಂತಹ ಅದ್ಭುತ ಕಲೆಗಳನ್ನು ಮುಂದಿನ ಪೀಳಿಗೆಗೆ ಉಳಿಸಿಕೊಂಡು ಹೋಗಬೇಕಾಗಿದೆ. ಹಾಗಾಗಿ ಅವುಗಳನ್ನು ಬೆಳೆಸುವ ಜವಾಬ್ದಾರಿ ನಮ್ಮ ನಿಮ್ಮೆಲ್ಲರ ಮೇಲಿದೆ ಎಂದು ರಾಜಶೇಖರಯ್ಯ ಹಿರೇಮಠ ಹೇಳಿದರು.


Spread the love

LEAVE A REPLY

Please enter your comment!
Please enter your name here