ವಿಜಯಸಾಕ್ಷಿ ಸುದ್ದಿ, ಗದಗ: ಪ್ರಧಾನಮಂತ್ರಿ ಜನೌಷಧಿ ಕೇಂದ್ರವನ್ನು ಸರಕಾರಿ ಆಸ್ಪತ್ರೆ ಆವರಣದಿಂದ ತೆರವುಗೊಳಿಸಬೇಕೆಂದು ರಾಜ್ಯ ಸರಕಾರ ಆದೇಶ ಮಾಡಿದ್ದು ಖಂಡನೀಯ. ಜನೌಷಧಿ ಕೇಂದ್ರದಲ್ಲಿ ಬಡವರಿಗೆ ಕಡಿಮೆ ಬೆಲೆಗೆ ಉತ್ತಮ ಔಷಧಿ ದೊರೆಯುತ್ತಿದು, ಅದನ್ನು ಕಾಂಗ್ರೆಸ್ ಸರಕಾರ ಸಹಿಸಲಾಗದೇ ಈ ನಿರ್ಧಾರ ಕೈಗೊಂಡಿದೆ. ಸರಕಾರಿ ಆಸ್ಪತ್ರೆಯ ಆವರಣದಲ್ಲಿ ಇರುವ ಜನೌಷಧಿ ಕೇಂದ್ರವನ್ನು ಮುಚ್ಚಿಸಬಾರದು ಎಂದು ಹೊಳೆ ಆಲೂರು ಮಂಡಲ ಬಿಜೆಪಿ ಅಧ್ಯಕ್ಷ ಸೋಮಲಿಂಗಪ್ಪ ಬಿ.ಚರೇದ ರಾಜ್ಯ ಸರಕಾರದ ನೀತಿಯನ್ನು ಖಂಡಿಸಿದರು.
ಹೊಳೆ ಆಲೂರ ಮಂಡಲದ ಬೆಳವಣಕಿ ಗ್ರಾಮದ ಪ್ರಾಥಮಿಕ ಅರೋಗ್ಯ ಕೇಂದ್ರದ ಎದುರು ಹಮ್ಮಿಕೊಂಡಿದ್ದ ಮೌನ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ಪ್ರತಿಭಟನೆಯಲ್ಲಿ ಮಂಡಲ ಯುವ ಮೋರ್ಚಾ ಅಧ್ಯಕ್ಷ ಶರಣು ಬರಶೆಟ್ಟಿ, ಎಸ್.ಸಿ ಮೋರ್ಚಾ ಅಧ್ಯಕ್ಷ ಚಂದ್ರಶೇಖರ ಮಾದರ, ಎಸ್.ಟಿ ಮೋರ್ಚಾ ಅಧ್ಯಕ್ಷ ಮಂಜುನಾಥ್ ಚುಳಕಿ, ಪ್ರಧಾನ ಕಾರ್ಯದರ್ಶಿಗಳಾದ ನೀಲಪ್ಪಗೌಡ ದಾನಪ್ಪಗೌಡರ, ಮುದಿಯಪ್ಪ ದಾನಿ, ಬೆಳವಣಕಿ ಗ್ರಾ.ಪಂ ಮಾಜಿ ಅಧ್ಯಕ್ಷ ಈರಪ್ಪ ತಾಳಿ, ಶಿವಪ್ಪ ಹಾಲಭಾವಿ, ಹಿರಿಯರಾದ ಸುಭಾಸ ಹೊಸಂಗಡಿ, ಶಿವು ಪೂಜಾರ, ಶರಣಪ್ಪ ಹದ್ಲಿ, ಅಂದಪ್ಪ ಹೊಸಂಗಡಿ, ಮಲ್ಲಾಪುರ ಗ್ರಾ.ಪಂ ಅಧ್ಯಕ್ಷ ಹಣಮಂತಗೌಡ ಹುಲ್ಲೂರ ಸೇರಿದಂತೆ ಬೆಳವಣಕಿ, ಮಲ್ಲಾಪುರ, ಸಂದಿಗವಾಡ, ಹೊನ್ನಾಪುರ ಗ್ರಾಮದ ಬಿಜೆಪಿ ಕಾರ್ಯಕರ್ತರು ಭಾಗವಹಿಸಿದ್ದರು.



