ಜನಿವಾರ ವಿವಾದ: ಜಾತಿ ಜಾತಿಗಳ ನಡುವೆ ವಿಷ ಬಿತ್ತುವ ಕೆಲಸ ಇದು – ಚಕ್ರವರ್ತಿ ಸೂಲಿಬೆಲೆ ಆಕ್ರೋಶ

0
Spread the love

ಬೆಂಗಳೂರು: ಸಿಇಟಿ ಪರೀಕ್ಷೆ ವೇಳೆ ವಿದ್ಯಾರ್ಥಿಗಳು ಹಾಕಿದ್ದ ಜನಿವಾರ ತೆಗೆಸಿದ ಘಟನೆಯನ್ನು ಹಿಂದೂಪರ ಚಿಂತಕ ಚಕ್ರವರ್ತಿ ಸೂಲಿಬೆಲೆ ಖಂಡಿಸಿದ್ದು, ಜನಿವಾರದಲ್ಲಿ ಬ್ಲೂಟೂತ್ ಹಾಕ್ಕೊಂಡು ಬರೋಕೆ ಆಗುತ್ತಾ? ಅಂತ ಪ್ರಶ್ನೆ ಮಾಡಿದ್ದಾರೆ.

Advertisement

ನಗರದಲ್ಲಿ ಮಾತನಾಡಿದ ಅವರು, ಅಂಬೇಡ್ಕರ್ ಅವರೇ ನಾನು ಬ್ರಾಹ್ಮಣರ ವಿರೋಧಿಯಲ್ಲ ಅಂತ ಹೇಳ್ತಿದ್ರು. ಆದ್ರೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಬಂದ ನಂತರ ಈ ರೀತಿಯ ಪ್ರಕರಣಗಳು ಹೆಚ್ಚಾಗುತ್ತಿವೆ.

ಇದು ತುಂಬಾ ಶಾಕಿಂಗ್ ವಿಚಾರ. ಒಂದು ಸಮುದಾಯವನ್ನ ಇನ್ನೊಂದು ಸಮುದಾಯದ ವಿರುದ್ಧ ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದಾರೆ. ಉದ್ಧ ತೋಳಿನ ಶರ್ಟ್ ತೆಗೆಸ್ತಾರೆ, ಜನಿವಾರದಲ್ಲಿ ಬ್ಲೂಟೂತ್ ಹಾಕ್ಕೊಂಡು ಬರೋಕೆ ಆಗುತ್ತಾ? ಅಂತ ಪ್ರಶ್ನೆ ಮಾಡಿದ್ದಾರೆ.

ಹಿಜಬ್, ಬುರ್ಖಾಗೆ ಅನುಮತಿ ಕೊಡ್ತೀರ, ಇವೇಲ್ಲ ಇರಬಹುದು ಅದ್ರೆ ಜನಿವಾರ ಬೇಡ್ವಾ..? ಜಾತಿ ಜಾತಿಗಳ ನಡುವೆ ವಿಷ ಬೀತ್ತ ಬಿತ್ತಿವ ಕೆಲಸ ಇದು. ಜನಿವಾರ ಕಟ್ ಮಾಡಿದ ಮಾತ್ರಕ್ಕೆ ಹಿಂದುತ್ವ ಅಲುಗಾಡಿಸಲು ಆಗಲ್ಲ. ಜಾತಿಗಣತಿಯನ್ನ ಮರೆಮಾಚಲು ಈ ಘಟನೆ ತಂದಂತಿದೆ. ಕೂಡಲೇ ಈ ವಿಚಾರಕ್ಕೆ ಸಂಬಂಧಪಟ್ಟಂತೆ ಕ್ರಮ ಆಗಬೇಕು. ಮನಸ್ಸು ಮನಸ್ಸುಗಳ ಬಗ್ಗೆ ವಿಷಬೀಜ ಬಿತ್ತುವ ಕೆಲಸ ಆಗ್ತಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.


Spread the love

LEAVE A REPLY

Please enter your comment!
Please enter your name here