ಶ್ರೀ ಸೋಮೇಶ್ವರ ದೇವರ ಕಡುಬಿನ ಕಾಳಗ

0
Jatra Mahotsava of Shree Someshwara Temple
Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಪಟ್ಟಣದ ಶ್ರೀ ಸೋಮೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವದ ಅಂಗವಾಗಿ ಭಾನುವಾರ ಗೋಧೂಳಿ ಸಮಯದಲ್ಲಿ ಅಪಾರ ಭಕ್ತ ಸಮೂಹದ ನಡುವೆ ಶೃದ್ಧಾ ಭಕ್ತಿಯಿಂದ ಕಡುಬಿನ ಕಾಳಗ ನೆರವೇರಿತು.

Advertisement

ಕಡುಬಿನ ಕಾಳಗ ಸಂದರ್ಭದಲ್ಲಿ ಸೋಮೇಶ್ವರ ದೇವರ ಉತ್ಸವ ಮೂರ್ತಿಯೊಂದಿಗೆ ಪಲ್ಲಕ್ಕಿಯು ದೇವಸ್ಥಾನದ ಆವರಣದ, ರಥಬೀದಿ ಪ್ರದಕ್ಷಣೆ ಮತ್ತು ಅಲ್ಲಿಂದ ಸೋಮೇಶ್ವರ ಪಾದಗಟ್ಟಿಗೆ ತೆರಳಿ ಅಲ್ಲಿ 5 ಸುತ್ತು ಪ್ರದಕ್ಷಣೆಯೊಂದಿಗೆ ಕಡುಬಿನ ಕಾಳಗ ನೆರವೇರಿಸಲಾಯಿತು. ಈ ವೇಳೆ ಮುಳಗುಂದ ಮನೆತನದವರು ಸಂಪ್ರದಾಯದಂತೆ ಕಡುಬಿನ ಚೂರುಗಳು, ಬೆಂಡು, ಬತ್ತಾಸ, ಬಿಸ್ಕಟ್, ಬೆಲ್ಲ, ಹಣ್ಣು, ಕಲ್ಲುಸಕ್ಕರೆ ಇತ್ಯಾದಿ ಸಿಹಿ ಪದಾರ್ಥಗಳನ್ನು ಸೇರಿದ್ದ ಅಪರ ಭಕ್ತ ಸಮೂಹದತ್ತ ಎಸೆದರು. ಸೇರಿದ್ದ ಭಕ್ತರು ಅವುಗಳನ್ನು ಆಯ್ದು ಭಕ್ತಿಯಿಂದ ಆಯ್ದುಕೊಂಡು ಸ್ವೀಕರಿಸಿ ಈ ಪ್ರಸಾದ ಸೇವನೆಯಿಂದ ನಮ್ಮ ಬದುಕಿನ ಕಷ್ಟ ಕಾರ್ಪಣ್ಯಗಳು, ರೋಗ-ರುಜಿನಗಳು ದೂರಾಗಲಿ ಎಂದು ಪ್ರಾರ್ಥಿಸಿದರು.

ಸೋಮೇಶ್ವರ ಜಾತ್ರಾ ಕಮಿಟಿಯ ಮುಖಂಡರಾದ ಕುಬೇರಪ್ಪ ಮಹಾಂತಶೆಟ್ಟರ, ಚನ್ನಪ್ಪ ಜಗಲಿ, ವಿರೂಪಾಕ್ಷ ಆದಿ, ಬಸವರಾಜ ಮೆಣಸಿನಕಾಯಿ, ಸೋಮಣ್ಣ ಮುಳಗುಂದ, ಅಶೋಕ ಮುಳಗುಂದ, ರಾಮಣ್ಣ ಗೌರಿ, ಶಿವಯೋಗಿ ಅಂಕಲಕೋಟಿ, ಈರಣ್ಣ ಮುಳಗುಂದ, ಸಿದ್ದನಗೌಡ ಬಳ್ಳೊಳ್ಳಿ, ಬಸಣ್ಣ ಬಾಳಿಕಾಯಿ, ಶಂಭು ಬಂಡಿವಾಡ, ಚನ್ನಪ್ಪ ಆದಿ, ಚಂದ್ರು ಹಂಪಣ್ಣವರ, ಪ್ರಕಾಶ ಮುಳಗುಂದ, ದೀಪು ಕೊಂಚಿಗೇರಿಮಠ ಅರ್ಚಕರಾದ ಸೋಮನಾಥ ಪೂಜಾರ, ಚಿಕ್ಕರಸ ಪೂಜಾರ, ದಿಗಂಬರ ಪೂಜಾರ ಸೇವಕರಾದ ಸೋಮಣ್ಣ ತಂಡಿಗೇರಿ ಸೇರಿ ಅಪಾರ ಭಕ್ತರು ಪಾಲ್ಗೊಂಡಿದ್ದರು.


Spread the love

LEAVE A REPLY

Please enter your comment!
Please enter your name here