ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಉಡಚಮ್ಮದೇವಿ ದೇವಸ್ಥಾನದ ಬಳಿಯ ಅಂಬಿಗರ ಚೌಡಯ್ಯ ದೇವಸ್ಥಾನಕ್ಕೆ ಭೇಟಿ ನೀಡಿದ ಗದಗ ಜಿಲ್ಲಾ ನಿಜಶರಣ ಅಂಬಿಗರ ಚೌಡಯ್ಯ ಸಮಾಜ ಬಾಂಧವರು ಶರಣರ ಮೂರ್ತಿಗೆ ಪೂಜೆ ಮಾಡುವುದರೊಂದಿಗೆ ಚೌಡಯ್ಯನವರ ವಚನಗಳನ್ನು ಸ್ಮರಿಸಿ, ಶರಣರನ್ನ ನೆನೆದು ಜಯಂತಿಯನ್ನು ಸಂಭ್ರಮಿಸಿದರು.
ಅಂಬಿಗರ ಸಮಾಜದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಗಮೇಶ ಹಾದಿಮನಿ ಮಾತನಾಡಿ, ಜಾತಿರಹಿತ ಸಮಾಜಕ್ಕಾಗಿ ಹಗಲಿರುಳು ಶ್ರಮಿಸಿದ 12ನೇ ಶತಮಾನದ ಶರಣರಾದ ಬಸವಣ್ಣನವರು, ಅಂಬಿಗರ ಚೌಡಯ್ಯ, ಅಲ್ಲಮಪ್ರಭುದೇವರು, ಅಕ್ಕಮಹಾದೇವಿ, ಮಾದರ ಚನ್ನಯ್ಯ, ಡೋಹರ ಕಕ್ಕಯ್ಯ, ಸಮಗಾರ ಹರಳಯ್ಯ, ಜೇಡರ ದಾಸಿಮಯ್ಯ ಹಾಗೂ ಕಲ್ಯಾಣ ಶರಣರ ತತ್ವ-ಸಿದ್ಧಾಂತಗಳನ್ನು ಅಳವಡಿಸಿಕೊಂಡಾಗ ಜನರ ಬದುಕು ಉಜ್ವಲಗೊಳ್ಳುವುದು ಎಂದರು.
ಅಂಬಿಗರ ಸಮಾಜದ ಜಿಲ್ಲಾಧ್ಯಕ್ಷ ರಾಮಣ್ಣ ಇರಕಲ್ಲ ಅಂಬಿಗರ ಚೌಡಯ್ಯ ಜಯಂತಿಯ ಶುಭಾಶಯಗಳನ್ನು ತಿಳಿಸಿದರು. ಯುವ ಅಧ್ಯಕ್ಷ ಮಂಜುನಾಥ ಗುಡಿಸಾಗರ, ಕೆ.ಪಿ.ಸಿ.ಸಿ. ಮೀನುಗಾರರ ಜಿಲ್ಲಾಧ್ಯಕ್ಷ ಗುರಪ್ಪ ತಿರ್ಲಾಪೂರ, ಮಧು ಪೂಜಾರ, ರಾಜು ಪೂಜಾರ, ಅಮಿತ್ ಪೂಜಾರ, ರವಿಕುಮಾರ ಗುಡಿಸಾಗರ, ಹರೀಶ ಬಾರಕೇರ, ಸುನಿಲ ಬಾರಕೇರ, ಮುತ್ತು ಲಕ್ಕುಂಡಿ, ಹನಮಂತ ಸುಣಗಾರ, ಸಮಾಜದ ಯುವಕರು, ಹಿರಿಯರು ಪಾಲ್ಗೊಂಡಿದ್ದರು.