ಬಿಡದಿ:- ಬೆಳ್ಳಂ ಬೆಳಗ್ಗೆ ಬಿಡದಿಯಲ್ಲಿ ಜೆಸಿಬಿ ಘರ್ಜಿಸಿದ್ದು, ಫುಟ್‌ಪಾತ್ ಒತ್ತುವರಿ ತೆರವು ಮಾಡಲಾಗಿದೆ. ಪುರಸಭೆ ಅಧಿಕಾರಿಗಳಿಂದ ಈ ಕಾರ್ಯಾಚರಣೆ ನಡೆದಿದೆ.
Advertisement
ಇಲ್ಲಿನ ಬಿಡದಿಯ ಬಿಜಿಎಸ್ ಸರ್ಕಲ್‌ನಿಂದ ಸಿಲ್ಕ್ ಫಾರಂವರೆಗೆ ಫುಟ್‌ಪಾತ್ ಮೇಲೆ ಅಂಗಡಿ ಮಳಿಗೆಗಳ ನಿರ್ಮಾಣ ಮಾಡಿಕೊಂಡು ವ್ಯಾಪಾರ-ವಹಿವಾಟು ನಡೆಸಲಾಗುತ್ತಿತ್ತು. ಇದರಿಂದ ಪಾದಚಾರಿಗಳಿಗೆ ತೊಂದರೆಯಾಗುತ್ತಿರುವ ಹಿನ್ನೆಲೆ ಫುಟ್‌ಪಾತ್ ತೆರವು ಮಾಡುವಂತೆ ಅಂಗಡಿ ಮಾಲೀಕರಿಗೆ ಪುರಸಭೆ ನೋಟಿಸ್ ನೀಡಿತ್ತು.
ನೋಟಿಸ್‌ಗೂ ಬಗ್ಗದ ಅಂಗಡಿ ಮಾಲೀಕರಿಗೆ ಇಂದು ಪುರಸಭೆ ಶಾಕ್ ನೀಡಿದ್ದು, ಬೆಳ್ಳಂಬೆಳಗ್ಗೆ ಜೆಸಿಬಿ ಮೂಲಕ ಪುರಸಭೆ ಅಧಿಕಾರಿಗಳೇ ತೆರವು ಕಾರ್ಯಾಚರಣೆ ನಡೆಸಿದ್ದಾರೆ. ಫುಟ್‌ಪಾತ್ ಒತ್ತುವರಿ ತೆರವು ಮಾಡಿ, ಸಾರ್ವಜನಿಕರ ಓಡಾಟಕ್ಕೆ ಅನುವು ಮಾಡಿ ಕೊಟ್ಟಿದ್ದಾರೆ.