ಬೆಂಗಳೂರು: ಜೆಡಿಎಸ್ ನಾಯಕರು ಬಿಜೆಪಿಗೆ ಆಹ್ವಾನ ನೀಡದೆ ಹತ್ತಾರು ಪ್ರತಿಭಟನೆಗಳನ್ನು ಮಾಡಿದ್ದಾರೆ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಹೇಳಿದರು. ಫ್ರೀಡಂ ಪಾರ್ಕ್ನಲ್ಲಿ ಮಾತನಾಡಿದ ಅವರು, ಇದೇ ಪಾರ್ಕಲ್ಲಿ ಜೆಡಿಎಸ್ ಹತ್ತಾರು ಹೋರಾಟಗಳನ್ನು ಮಾಡಿದೆ, ಬಿಜೆಪಿಗೆ ಅಹ್ವಾನ ನೀಡಿರಲಿಲ್ಲ, ಹಾಗೆಯೇ ಬಿಜೆಪಿ ಕೂಡ ಹತ್ತಾರು ಮುಷ್ಕರಗಳನ್ನು ಜೆಡಿಎಸ್ ಇಲ್ಲದೆ ಮಾಡಿದೆ,
ಅವರು ಬೇಸರ ವ್ಯಕ್ತಪಡಿಸಿರುವುದು ಸರಿಯಲ್ಲ, ಬಿಜೆಪಿ ಮತ್ತು ಜೆಡಿಎಸ್ ಸದನದೊಳಗೆ ಜಂಟಿಯಾಗಿ ಹೋರಾಟ ಮಾಡುತ್ತಿವೆ, ಚುನಾವಣೆಗಳಲ್ಲಿ ಜೆಡಿಎಸ್ ಜೊತೆ ಹೊಂದಾಣಿಕೆ ಇದೆ, ಅದೇ ಬೇರೆ ಪ್ರತಿಭಟನೆಗಳೇ ಬೇರೆ, ಜೆಡಿಎಸ್ ನಾಯಕರು ದುರಹಂಕಾರದಂಥ ಪದ ಬಳಸುವುದು ಸರಿಯಲ್ಲ ಎಂದು ಹೇಳಿದರು.
ಇನ್ನೂ ಸಚಿವರು ಅಂಗಡಿ ತೆರೆದಿದ್ದಾರೆ. 40% ಆರೋಪಕ್ಕೆ ಸಾಕ್ಷಿ ಇಲ್ಲ. ಆದರೆ ಕಾಂಗ್ರೆಸ್ ಸರ್ಕಾರ 60% ಕಮಿಷನ್ ಪಡೆದುಕೊಳ್ಳುತ್ತಿದೆ. ಸ್ಮಾರ್ಟ್ ಮೀಟರ್ ನಲ್ಲಿ 15,000 ಹಗರಣ ನಡೆದಿದೆ. ಸಿದ್ದರಾಮಯ್ಯ ಹೆಸರಿಗಷ್ಟೇ ಸಿಎಂ. ಸರ್ಕಾರದ ಗಾಲಿ ಕುರ್ಚಿಯಲ್ಲಿದೆ ಎಂದು ಕಿಡಿಕಾರಿದರು.