ಜಮೀನು ವಿಚಾರವಾಗಿ ಜೆಡಿಎಸ್ ಮುಖಂಡನ ಕೊಲೆ ಕೇಸ್: 7 ಮಂದಿ ಬಂಧನ!

0
Spread the love

ಮೈಸೂರು:- ಮೈಸೂರಿನ ಬೆಲವತ್ತದಲ್ಲಿ ನಡೆದಿದ್ದ ಜೆಡಿಎಸ್ ಮುಖಂಡ ಹನುಮಂತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ 7 ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತರನ್ನು ವಿನೋದ್, ಮೋಹನ್, ಯೋಗ, ಸಂತು, ಆಂಥೋಣಿ, ವೇಣುಗೋಪಾಲ್ ಮತ್ತು ಮಂಜು ಎಂದು ಗುರುತಿಸಲಾಗಿದೆ.

Advertisement

ಡಿಸೆಂಬರ್ 22ರಂದು ಮೈಸೂರು ಹೊರವಲಯದ ಬೆಲವತ್ತ ಗ್ರಾಮದಲ್ಲಿ ಜೆಡಿಎಸ್​ ಮುಖಂಡ ಹನುಮಂತು ಕೊಲೆಯಾಗಿತ್ತು. ರಾತ್ರಿ ಬೈಕ್‌ನಲ್ಲಿ ಹೋಗುತ್ತಿದ್ದ ಹನುಮಂತುರನ್ನು ಅಡ್ಡಗಟ್ಟಿದ ಕಿಡಿಗೇಡಿಗಳು ಬೈಕ್ ಬೀಳಿಸಿ ಮನಸೋ ಇಚ್ಚೇ ಇರಿದು ಕೊಲೆ ಮಾಡಿದ್ದರು. ಜನರ ಓಡಾಟವಿರುವ ಜಾಗದಲ್ಲಿ ಕ್ಷಣಾರ್ಧದಲ್ಲಿ ನಡೆದು ಹೋದ ಭೀಕರ ಕೊಲೆ ಎಲ್ಲರನ್ನೂ ಬೆಚ್ಚಿ ಬೀಳಿಸಿತ್ತು.

ಹನುಮಂತು ಮೈಸೂರಿನ ಬೆಲವತ್ತ ಗ್ರಾಮದ ನಿವಾಸಿ‌. ರೈತರಾಗಿದ್ಣ ಹನುಮಂತು ಜೆಡಿಎಸ್ ಪಕ್ಷದ ಮುಖಂಡ ಕೂಡ ಹೌದು. ಜೊತೆಗೆ ಹಲವು ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದರು. ಸಾಕಷ್ಟು ಹೋರಾಟ ಪ್ರತಿಭಟನೆಗಳಲ್ಲಿ ಭಾಗಿಯಾಗಿದ್ದರು. ಯಾವುದೇ ಹೋರಾಟ ಅಂತಾ ಅಂದ್ರು ಹನುಮಂತು ಮುಂಚೂಣಿಯಲ್ಲಿರುತ್ತಿದ್ದರು. ಎಲ್ಲರ ಜೊತೆಯಲ್ಲೂ ಹನುಮಂತು ಚೆನ್ನಾಗಿಯೇ ಇದ್ದರು. ಇಷ್ಟೊಂದು ಆ್ಯಕ್ಟೀವ್ ಆಗಿದ್ದ ಹನುಮಂತು ಕೊಲೆಯಾಗಿದ್ದು ಎಲ್ಲರ ಅಚ್ಚರಿಗೆ ಕಾರಣವಾಗಿತ್ತು. ಘಟನೆ ಸಂಬಂಧ ಮೈಸೂರಿನ ಮೇಟಗಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ತನಿಖೆ ಕೈಗೊಂಡಿದ್ದ ಪೊಲೀಸರು, ಇದೀಗ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.


Spread the love

LEAVE A REPLY

Please enter your comment!
Please enter your name here