HomeGadag Newsಜೆಡಿಎಸ್ ಸದಸ್ಯತ್ವ ಅಭಿಯಾನ

ಜೆಡಿಎಸ್ ಸದಸ್ಯತ್ವ ಅಭಿಯಾನ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ನವಲಗುಂದ : ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಕನಿಷ್ಠ 50 ಸಾವಿರ ಸದಸ್ಯತ್ವ ನೋಂದಾಯಿಸುವ ವಿಶ್ವಾಸ ತಮಗಿದೆ ಎಂದು ಮಾಜಿ ಸಚಿವ ಕೆ.ಎನ್. ಗಡ್ಡಿ ವಿಶ್ವಾಸ ವ್ಯಕ್ತಪಡಿಸಿದರು.

ಪಕ್ಷದ ಜಿಲ್ಲಾ ಅಧ್ಯಕ್ಷ ಬಿ.ಬಿ. ಗಂಗಾಧರಮಠ ಹಾಗೂ ಇತರ ಪದಾಧಿಕಾರಿಗಳೊಂದಿಗೆ ನವಲಗುಂದದಲ್ಲಿ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿದ ಅವರು ಕ್ಷೇತ್ರದಲ್ಲಿ ಪಕ್ಷವನ್ನು ಸದೃಢವಾಗಿ ಕಟ್ಟಿ ಬೆಳೆಸಲು ತಾವೆಲ್ಲ ಪಣತೊಟ್ಟಿರೋದಾಗಿ ಹೇಳಿದರು.

ಸಾಲಮನ್ನಾ ಸೇರಿದಂತೆ ಅನೇಕ ಜನಪರ ಯೋಜನೆಗಳ ಮೂಲಕ ರೈತರ ಹಿತ ಕಾಪಾಡಿದ್ದು ಎಚ್.ಡಿ. ಕುಮಾರಸ್ವಾಮಿಯವರು. ಆದರೆ ಅವರ ಉಪಕಾರವನ್ನು ತಾವು ತೀರಿಸಲಿಲ್ಲ ಎನ್ನುವ ನೋವು ರೈತರಲ್ಲಿದೆ. ಹೀಗಾಗಿ ಜೆಡಿಎಸ್ ಸದಸ್ಯತ್ವ ಹೊಂದಲು ಕ್ಷೇತ್ರದ ತುಂಬೆಲ್ಲ ಜನರು ಉತ್ಸಾಹ ತೋರುತ್ತಿದ್ದಾರೆ ಎಂದರು.

ಪಕ್ಷದ ಜಿಲ್ಲಾ ಅಧ್ಯಕ್ಷ ಬಿ.ಬಿ. ಗಂಗಾಧರಮಠ ಮಾತನಾಡಿ, ನವಲಗುಂದ ವಿಧಾನಸಭಾ ಕ್ಷೇತ್ರದಲ್ಲಿ ಈಗಲೂ ಜನರಲ್ಲಿ ಜೆಡಿಎಸ್ ಪಕ್ಷದ ಮನಸ್ಥಿತಿ ಇದೆ ಎಂದರು. ಪಕ್ಷದ ಮುಖಂಡರಾದ ಪ್ರಕಾಶ ಅಂಗಡಿ, ಜಿ.ಎನ್. ತೋಟದ, ಎಂ.ಎಸ್. ಪಾಟೀಲ, ಶ್ರೀಶೈಲ ಮೂಲಿಮನಿ, ಡಿ.ಎಂ. ಶಲವಡಿ, ವೀರೇಶ ಶಾನುಭೋಗರ, ಮೈಲಾರಪ್ಪ ವೈದ್ಯ, ನಾಗಪ್ಪ ಬಂಡಿವಾಡ, ಈಶ್ವರಯ್ಯ ಹಿರೇಮಠ, ರಾಚಯ್ಯ ಚಿಕ್ಕಮಠ, ಗಂಗಾಧರ ಪತ್ತಾರ, ಮಂಜಪ್ಪ ಆಡಕಾವು, ಈರಪ್ಪ ಬಡಿಗೇರ, ಜಿ.ಟಿ. ಅಕ್ಕಿ, ಶಿವಪ್ಪ ಗುಜ್ಜಳ, ಮಲ್ಲಪ್ಪ ಮಡಿವಾಳರ ಮತ್ತಿತರರು ಹಾಜರಿದ್ದರು.


Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!