ದಕ್ಷಿಣ ಕನ್ನಡ: ಧರ್ಮಸ್ಥಳ ವಿರುದ್ಧ ಅಪಪ್ರಚಾರ ಖಂಡಿಸಿ ಜೆಡಿಎಸ್ ನಿಂದ ಸತ್ಯಯಾತ್ರೆ ಕೈಗೊಳ್ಳಲಾಗಿದೆ.
ಈ ಸಂಬಂಧ ಮಾತನಾಡಿದ ನಿಖಿಲ್ ಕುಮಾರಸ್ವಾಮಿ, ಧರ್ಮಸ್ಥಳದ ದೂರುದಾರನನ್ನು ನೋಡಿದ್ರೆ ಅವನ ಹಿಂದೆ ಒಬ್ಬರು ಇಬ್ಬರು ಇಲ್ಲ. ದೊಡ್ಡ ಸಂಸ್ಥೆಗಳೇ ಇದೆ. ಕೇಂದ್ರದ ತನಿಖಾ ಸಂಸ್ಥೆಯಿಂದಲೇ ಈ ಬಗ್ಗೆ ತನಿಖೆ ಆಗಬೇಕು. ಇದು ಸಂಪೂರ್ಣ ಜೆಡಿಎಸ್ ಪಕ್ಷದ ಆಗ್ರಹವಿದೆ ಎಂದು ನಿಖಿಲ್ ಕುಮಾರಸ್ವಾಮಿ ಆಗ್ರಹಿಸಿದರು.
ಶ್ರೀ ಕ್ಷೇತ್ರದ ವಿರುದ್ಧ ಯಾವುದೇ ದುಷ್ಟ ಶಕ್ತಿ ಮಂಜುನಾಥ ಸ್ವಾಮಿಯ ಮುಂದೆ ಉಳಿಯಲು ಸಾಧ್ಯವಿಲ್ಲ. ಹಲವು ದಿನದಿಂದ ಪುಣ್ಯ ಕ್ಷೇತ್ರ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದೆ. ಭಕ್ತರಾಗಿ ಇನ್ನು ಮನೆಯಲ್ಲಿ ಕೈಕಟ್ಟಿ ಕುಳಿತುಕೊಳ್ಳಲು ಆಗಲ್ಲ. ಧರ್ಮಸ್ಥಳ ಸತ್ಯಯಾತ್ರೆ ರಾಜಕೀಯ ಲಾಭ, ಲೆಕ್ಕಾಚಾರದ ವೇದಿಕೆ ಅಲ್ಲ. ಮಂಜುನಾಥ, ಅಣ್ಣಪ್ಪ ಸ್ವಾಮಿಯ ಭಕ್ತರು ದೇಶ ವ್ಯಾಪಿ, ವಿದೇಶದಿಂದ ಕೋಟ್ಯಾಂತರ ಸಂಖ್ಯೆಯಲ್ಲಿದ್ದಾರೆ. ನಾವು ಭಕ್ತರಾಗಿ ಬಂದು ಇಂದು ಶರಣಾಗಿದ್ದೇವೆ ಎಂದು ನಿಖಿಲ್ ಕುಮಾರಸ್ವಾಮಿ ಅವರು ಹೇಳಿದರು.