ಮೈಸೂರು: ರಾಜ್ಯ ಸರ್ಕಾರದ ವೈಫಲ್ಯದಿಂದ ಮುಂದೆ ಜೆಡಿಎಸ್ ಅಧಿಕಾರಕ್ಕೆ ಬರಲಿದೆ ಎಂದು ಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ವೈಫಲ್ಯದಿಂದ ಮುಂದೆ ಜೆಡಿಎಸ್ ಅಧಿಕಾರಕ್ಕೆ ಬರಲಿದೆ. ಎಲ್ಲಾ ಕಾರ್ಯಕರ್ತರಿಗೆ ಅಧಿಕಾರ ಕೊಡಿಸುವುದು ನಮ್ಮ ಗುರಿ.
ರಾಜ್ಯದಲ್ಲಿ ಸಂಘಟನೆಗೆ ಮೊದಲ ಆದ್ಯತೆ ನೀಡುತ್ತಿದ್ದೇನೆ. ಮೊದಲು ಎಲ್ಲಾ ರೀತಿಯ ಸಂಘಟನೆಯಲ್ಲಿ ನಾನು ಪಾಲ್ಗೊಳ್ಳುತ್ತೇನೆ. ತಂದೆ, ತಾತ ಅವರ ಅನಾರೋಗ್ಯ ಹಿನ್ನೆಲೆ ಒತ್ತಡ ಬರುತ್ತಿದೆ. ಆದರೆ, ಪಕ್ಷದಲ್ಲಿ ಹಲವು ಹಿರಿಯ ನಾಯಕರು ಇದ್ದಾರೆ. ಸದ್ಯಕ್ಕೆ ರಾಜ್ಯಾಧ್ಯಕ್ಷ ಪಟ್ಟ ಎಂಬುದು ಅಪ್ರಸ್ತುತ ಎನಿಸಿದೆ ಎಂದು ಹೇಳಿದರು.
ಇನ್ನೂ ಜೆಡಿಎಸ್ ಪಕ್ಷದ ಹಿರಿಯ ನಾಯಕ ಮತ್ತು ಶಾಸಕ ಜಿಟಿ ದೇವೇಗೌಡ ಅವರು ಪಕ್ಷದ ನಾಯಕತ್ವದಿಂದ ಅಂತರವನ್ನು ಈಗಲೂ ಕಾಯ್ದುಕೊಂಡಿದ್ದಾರೆ ಮತ್ತು ಯಾಕೆ ಮುನಿಸು ಅನ್ನುವ ಬಗ್ಗೆ, ಜಿಟಿಡಿ ಅವರು ಕ್ಷೇತ್ರದ ಕೆಲಸಗಳಲ್ಲಿ ಬ್ಯೂಸಿಯಾಗಿರುವುದರಿಂದ ಸಭೆಗೆ ಬಂದಿಲ್ಲ, ಅವರು ಪಕ್ಷದ ಹಿರಿಯ ನಾಯಕರು ಮತ್ತು ಅವರ ಬಗ್ಗೆ ತನ್ನಲ್ಲಿ ಅಪಾರವಾದ ಗೌರವವಿದೆ ಎಂದು ನಿಖಿಲ್ ಕುಮಾರಸ್ವಾಮಿ ತಿಳಿಸಿದರು.