ಹಾಡಹಗಲೇ ಜ್ಯುವೆಲ್ಲರಿ ಶಾಪ್ ಲೂಟಿ: ಬಂದೂಕು ತೋರಿಸಿ ಆಭರಣ ಕದ್ದೊಯ್ದ ಕಳ್ಳರು!

0
Spread the love

ಪುಣೆ:-ಇತ್ತೀಚಿನ ದಿನದಲ್ಲಿ ಕಳ್ಳತನ, ದರೋಡೆ, ಕೊಲೆ ಸುಲಿಗೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ಕಳ್ಳರು ತಮ್ಮ ಕರಾಮತ್ತು ತೋರುತ್ತಿದ್ದಾರೆ. ಅದರಂತೆ ಪುಣೆಯಲ್ಲಿ ನಡೆದ ಘಟನೆ ಬೆಚ್ಚಿ ಬೀಳುವಂತಿದೆ.

Advertisement

ಹಾಡಹಗಲೇ ಮೂವರು ವ್ಯಕ್ತಿಗಳು ಬಂದೂಕು ತೋರಿಸಿ ಆಭರಣ ಅಂಗಡಿಯನ್ನು ಲೂಟಿ ಮಾಡಿದ್ದಾರೆ. ಇಡೀ ಘಟನೆ ಅಂಗಡಿಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದು ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ದರೋಡೆಕೋರರು ಅಂಗಡಿಗೆ ನುಗ್ಗಿ ಅಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಆಭರಣಗಳನ್ನು ದೋಚಿದ್ದಾರೆ. ವಿಡಿಯೊದಲ್ಲಿ, ದರೋಡೆಕೋರರಲ್ಲಿ ಒಬ್ಬರು ಅಂಗಡಿಯೊಳಗಿನ ವ್ಯಕ್ತಿಯ ಮೇಲೆ ಬಂದೂಕನ್ನು ಗುರಿಯಾಗಿಸಿಕೊಂಡರೆ, ಇನ್ನೊಬ್ಬ ವ್ಯಕ್ತಿಯ ಕಾಲರ್ ಹಿಡಿದು ಕೆಳಕ್ಕೆ ತಳ್ಳುತ್ತಿದ್ದಾನೆ. ಮೂರನೆಯವನು ಅಂಗಡಿಯೊಳಗೆ ಇದ್ದ ವಸ್ತುಗಳನ್ನು ತೆಗೆದುಕೊಂಡಿದ್ದಾನೆ ಮತ್ತು ನಂತರ, ಮೂವರು ಅಂಗಡಿಯಿಂದ ಹೊರಗೆ ಹೋಗಿದ್ದಾರೆ

ಪುಣೆಯ ಲಕ್ಷ್ಮಿ ಚೌಕ್ ಹಿಂಜೇವಾಡಿಯಲ್ಲಿ ಬೆಳಿಗ್ಗೆ 10:30 ಕ್ಕೆ ಈ ಘಟನೆ ನಡೆದಿದ್ದು, ಕೆಲವೇ ಸೆಕೆಂಡುಗಳಲ್ಲಿ ದರೋಡೆಕೋರರು ಅಂಗಡಿಯಲ್ಲಿರುವ ಬೆಲೆಬಾಳುವ ವಸ್ತುಗಳನ್ನು ತೆಗೆದುಕೊಂಡು ಜಾಗ ಖಾಲಿ ಮಾಡಿದ್ದಾರೆ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಈಗಾಗಲೇ ಸಿಸಿಟಿವಿಯಲ್ಲಿ ಕಳ್ಳತನದ ದೃಶ್ಯ ಸೆರೆಯಾಗಿದ್ದು, ಪೊಲೀಸರು ಅದನ್ನು ಪರೀಶಿಲಿಸಿ ಕಳ್ಳರನ್ನು ಹುಡುಕುವ ಪ್ರಯತ್ನ ನಡೆಸುತ್ತಿದ್ದಾರೆ ಎನ್ನಲಾಗಿದೆ.

ಒಟ್ಟಿನಲ್ಲಿ ಅಪರಾಧ ಚಟುವಟಿಕೆಗಳು ಹೆಚ್ಚಾಗುತ್ತಿದ್ದು, ಪೊಲೀಸರು ಕಡಿವಾಣ ಹಾಕುವಂತೆ ಅಲ್ಲಿನ ಸಾರ್ವಜನಿಕರು ಒತ್ತಾಯಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here