HomeSports Newsಜಿತೇಶ್-ಮಯಾಂಕ್ ಅಬ್ಬರದ ಆಟ: 228ರನ್​ಗಳ ದಾಖಲೆ ರನ್ ಚೇಸ್​ ಮಾಡಿ ಟಾಪ್​ 2 ಸ್ಥಾನ ಗಿಟ್ಟಿಸಿಕೊಂಡ...

ಜಿತೇಶ್-ಮಯಾಂಕ್ ಅಬ್ಬರದ ಆಟ: 228ರನ್​ಗಳ ದಾಖಲೆ ರನ್ ಚೇಸ್​ ಮಾಡಿ ಟಾಪ್​ 2 ಸ್ಥಾನ ಗಿಟ್ಟಿಸಿಕೊಂಡ ಆರ್ ಸಿಬಿ!

For Dai;y Updates Join Our whatsapp Group

Spread the love

ಐಪಿಎಲ್ 2025ರ ಕೊನೆಯ ಲೀಗ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅಮೋಘ ಆಟವಾಡಿ ಲಕ್ನೋ ವಿರುದ್ಧ 6 ವಿಕೆಟ್​ಗಳ ರೋಚಕ ಗೆಲುವು ಸಾಧಿಸಿದೆ.

ಗೆಲುವು ಅನಿವಾರ್ಯವಾಗಿದ್ದ ಪಂದ್ಯದಲ್ಲಿ 228 ರನ್​ಗಳ ಗುರಿ ಬೆನ್ನಟ್ಟಿದ ಆರ್​ಸಿಬಿ ಮೊದಲ ವಿಕೆಟ್​ಗೆ 61 ರನ್​ಗಳ ಜೊತೆಯಾಟ ನೀಡಿತು. ಫಿಲ್ ಸಾಲ್ಟ್ 19 ಎಸೆತಗಳಲ್ಲಿ 6 ಬೌಂಡರಿಗಳ ಸಹಿತ 30 ರನ್​ಗಳಿಸಿ ಔಟ್​ ಆದರು. ಆಕಾಶ್ ಸಿಂಗ್​​ಗೆ ವಿಕೆಟ್ ಒಪ್ಪಿಸಿದರು. ನಂತರ ಬಂದ ರಜತ್ ಪಾಟೀದಾರ್ 7 ಎಸೆತಗಳಲ್ಲಿ ತಲಾ 1 ಬೌಂಡರಿ, 1 ಸಿಕ್ಸರ್​ ಸಹಿತ 13 ರನ್​ಗಳಿಸಿ ಓರೂರ್ಕ್​ ಬೌಲಿಂಗ್​ನಲ್ಲಿ ಸಮದ್​ಗೆ ಕ್ಯಾಚ್ ನೀಡಿ ಮತ್ತೊಮ್ಮೆ ವೈಫಲ್ಯ ಅನುಭವಿಸಿದರು. ಅದೇ ಓವರ್​ನ ನಂತರದ ಎಸೆತದಲ್ಲೇ ಬಹಳ ದಿನಗಳ ಬಳಿಕ ತಂಡದಲ್ಲಿ ಸ್ಥಾನ ಪಡೆದಿದ್ದ ಲಿಯಾಮ್ ಲಿವಿಂಗ್​ಸ್ಟೋನ್ (0) ಗೋಲ್ಡನ್ ಡಕ್ ಆಗಿ ತಮ್ಮ ದಯನೀಯ ವೈಫಲ್ಯವನ್ನು ಮುಂದುವರಿಸಿದರು.

90ಕ್ಕೆ 3 ವಿಕೆಟ್ ಕಳೆದುಕೊಂಡಿದ್ದ ಸಂದರ್ಭದಲ್ಲಿ ಕ್ರೀಸ್ಗೆ ಬಂದ ಕನ್ನಡಿಗ ಮಯಾಂಕ್​ ಅಗರ್ವಾಲ್ ಕೊಹ್ಲಿ ಜೊತೆ ಸೇರಿ 33 ರನ್ ಸೇರಿಸಿದರು. 30 ಎಸೆತಗಳಲ್ಲಿ 10 ಬೌಂಡರಿ ಸಹಿತ 54 ರನ್​ಗಳಿಸಿದ್ದ ಕೊಹ್ಲಿ ಆವೇಶ್​ ಖಾನ್​ಗೆ ವಿಕೆಟ್ ಒಪ್ಪಿಸಿದರು. ಆದರೆ 5ನೇ ವಿಕೆಟ್​ಗೆ ಒಂದಾದ ಮಯಾಂಕ್ ಹಾಗೂ ನಾಯಕ ಜಿತೇಶ್ ಶರ್ಮಾ ಪಂದ್ಯದ ಗತಿಯನ್ನೇ ಬದಲಿಸಿದರು. ಇವರಿಬ್ಬರು ಕೇವಲ 45 ಎಸೆತಗಳಲ್ಲಿ ಅಜೇಯ 107 ರನ್​ಗಳಿಸಿ ತಂಡವನ್ನ ಇನ್ನು 8 ಎಸೆತಗಳಿರುವಂತೆ ಗೆಲುವಿನ ಗಡಿ ದಾಟಿಸಿದರು.

ಈ ಗೆಲುವಿನ ಮೂಲಕ ಆರ್ ಸಿಬಿ ಪಾಯಿಂಟ್ಸ್ ಟೇಬಲ್ ನಲ್ಲಿ ಎರಡನೇ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಯ್ತು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!