ಸ್ಯಾಂಡಲ್ ವುಡ್ ನ ಖ್ಯಾತ ನಿರ್ದೇಶಕ ಕಂ ನಟ ಜೋಗಿ ಪ್ರೇಮ್ ಅವರಿಗೆ ವ್ಯಕ್ತಿಯೊಬ್ಬರು ವಂಚನೆ ಮಾಡಿರುವ ಘಟನೆ ನಡೆದಿದೆ. ಎರಡು ಎಮ್ಮೆಗಳನ್ನು ಕೊಡುವುದಾಗಿ ಹೇಳಿ ಪ್ರೇಮ್ ಅವರಿಂದ 4.5 ಲಕ್ಷ ರೂಪಾಯಿ ವಂಚನೆ ಮಾಡಿದ್ದು ಇದೀಗ ಈ ಬಗ್ಗೆ ಪ್ರೇಮ್ ಅವರು ತಮ್ಮ ಮ್ಯಾನೇಜರ್ ಮೂಲಕ ದೂರು ದಾಖಲಿಸಿದ್ದಾರೆ
ಹೈನುಗಾರಿಕೆ ಮಾಡಲು ಎರಡು ಎಮ್ಮೆಗಳನ್ನು ಖರೀದಿಸಲು ಜೋಗಿ ಪ್ರೇಮ್ ಮುಂದಾಗಿದ್ದಾರೆ. ಹೀಗಾಗಿ ಮೂಲದ ವನರಾಜ್ ಭಾಯ್ ಎನ್ನುವರ ಜೊತೆ ಮಾತನಾಡಿ ಮುಂಡಗವಾಗಿ ವನರಾಜ್ಗೆ 25 ಸಾವಿರ ಹಣ ನೀಡಿದ್ದರು. ಇದಾದ ಮೇಲೆ ವಾಟ್ಸ್ಪ್ ಮೂಲಕ ಎರಡು ಎಮ್ಮೆಗಳ ವಿಡಿಯೋಗಳನ್ನು ವಂಚಕ ವನರಾಜ್ ಭಾಯ್ ನಿರ್ದೇಶಕ ಜೋತಿ ಪ್ರೇಮ್ ಅವರಿಗೆ ಕಳುಹಿಸಿದ್ದಾನೆ.
ವಿಡಿಯೋ ನೋಡಿದ ಪ್ರೇಮ್ ಆತನ ಖಾತೆಗೆ ಹಂತ ಹಂತವಾಗಿ 4.5 ಲಕ್ಷ ರೂಪಾಯಿಗಳನ್ನು ಹಾಕಿದ್ದಾರೆ. ಹಣ ಪಡೆದ ವಂಚಕ ಆ ಬಳಿಕ ಎಮ್ಮೆಗಳನ್ನು ನೀಡದೇ, ಅತ್ತ ಹಣವನ್ನು ವಾಪಸ್ ನೀಡದೇ ಎಸ್ಕೇಪ್ ಆಗಿದ್ದಾನೆ. ಒಂದು ವಾರದಲ್ಲಿ ಎಮ್ಮೆ ತಂದು ಕೊಡುತ್ತೇನೆ ಎಂದವನು ದುಡ್ಡು ತೆಗೆದುಕೊಂಡು ಪರಾರಿಯಾಗಿದ್ದಾನೆ.
ತಮ್ಮ ಆಪ್ತರೊಬ್ಬರನ್ನ ವನರಾಜ್ ಭಾಯ್ ನೀಡಿದ್ದ ವಿಳಾಸದ ಪರಿಶೀಲನೆಗೆ ಕಳುಹಿಸಿದ್ದರು. ಆದರೆ ವಂಚಕ ತಪ್ಪು ವಿಳಾಸ ನೀಡಿರುವುದು ಗೊತ್ತಾಗಿದೆ. ಫೋನ್ ಮೂಲಕ ಸಂಪರ್ಕಿಸಲು ಪ್ರಯತ್ನಿಸಿದರು ಆತನ ಮೊಬೈಲ್ ಸ್ವಿಚ್ ಆಫ್ ಮಾಡಿದ್ದಾನೆ. ಹೀಗಾಗಿ ಎಮ್ಮೆಗಳನ್ನ ನೀಡದೆ ವಂಚಿಸಿದವನ ವಿರುದ್ಧ ಪ್ರೇಮ್ ಅವರು ತಮ್ಮ ಮ್ಯಾನೇಜರ್ ಕಮ್ ನಟ ದಶಾವರ ಚಂದ್ರು ಅವರ ಮೂಲಕ ಚಂದ್ರಾಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.