ವಿಜಯಸಾಕ್ಷಿ ಸುದ್ದಿ, ಮುಂಡರಗಿ: ಮುಂಡರಗಿ ಪಟ್ಟಣದಲ್ಲಿ ವೀರಶೈವ ಪಂಚಮಸಾಲಿ ಸಮುದಾಯದ ಭವನ ನಿರ್ಮಾಣಕ್ಕೆ ಸಮಾಜಬಾಂಧವರು ಸಂಘಟಿತರಾಗಿ ಒಗ್ಗಟ್ಟಿನಿಂದ ಕಾರ್ಯ ಮಾಡುವ ಅಗತ್ಯವಿದೆ ಎಂದು ಸಮಾಜದ ಹಿರಿಯರೂ, ನಿವೃತ್ತ ಉಪನ್ಯಾಸಕರೂ ಆದ ಪ್ರೊ. ಆರ್.ಎಲ್. ಪೊಲೀಸ್‌ಪಾಟೀಲ ಹೇಳಿದರು.
ಅವರು ಮುಂಡರಗಿ ಪಟ್ಟಣದ ನಿಯೋಜಿತ ವೀರಶೈವ ಪಂಚಮಸಾಲಿ ಸಮುದಾಯ ಭವನದ ಸ್ಥಳದಲ್ಲಿ ಏರ್ಪಡಿಸಲಾಗಿದ್ದ ವೀರಶೈವ ಪಂಚಮಸಾಲಿ ಸಮಾಜದ ಸಭೆಯಲ್ಲಿ ಮಾತನಾಡಿದರು.
ನಿಯೋಜಿತ ಸಮುದಾಯ ಭವನ ನಿರ್ಮಾಣದ ಕಾರ್ಯ ಹಲವು ವರ್ಷಗಳಿಂದ ಬಾಕಿ ಉಳಿದಿದ್ದು, ಪಟ್ಟಣದ ಸಮಾಜಬಾಂಧವರು ಸಂಘಟಿತರಾಗಿ, ಉದಾರ ದೇಣಿಗೆ ಹಾಗೂ ಸರಕಾರ, ಶಾಸಕರ, ಸಂಸದರ ಅನುದಾನದಿಂದ ಪೂರ್ಣಗೊಳಿಸಲು ಅವಕಾಶವಿದ್ದು, ಸಮಾಜದ ಹಿತಚಿಂತಕರು ಮುಂದೆ ಬರಬೇಕಿದೆ ಎಂದರು.
ಪುರಸಭೆಯ ಉಪಾಧ್ಯಕ್ಷ ನಾಗೇಶ ಹುಬ್ಬಳ್ಳಿ, ಸದಸ್ಯರಾದ ಟಿ.ಬಿ. ದಂಡಿನ, ನಾಗರಾಜ ಹೊಂಬಳಗಟ್ಟಿ, ಗಣ್ಯ ಉದ್ಯಮಿಗಳಾದ ರಜನಿಕಾಂತ ದೇಸಾಯಿ ಮಾತನಾಡಿದರು. ವೀರರಾಣಿ ಕಿತ್ತೂರ ಚೆನ್ನಮ್ಮಳ ಮೂರ್ತಿ ಪ್ರತಿಷ್ಠಾಪನೆಯ ಸುತ್ತಲಿನ ಪ್ರದೇಶದಲ್ಲಿ ಸಿಮೆಂಟ್‌ನ ಫೇವರ್ಸ್ ಹೊಂದಿಸಿ ಸೌಂದರ್ಯ ಹೆಚ್ಚಿಸುವ ಕಾರ್ಯಕ್ಕೆ ಗುದ್ದಲಿ ಪೂಜೆ ನೆರವೇರಿಸಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಪಂಚಮಸಾಲಿ ಸಮಾಜದ ತಾಲೂಕಾಧ್ಯಕ್ಷ ಎಸ್.ವಿ. ಪಾಟೀಲ ವಹಿಸಿದ್ದರು. ಸಮಾರಂಭದಲ್ಲಿ ಹಿರಿಯರಾದ ಅಶೋಕ ಹಂದ್ರಾಳ, ಶಹರ ಘಟಕದ ಅಧ್ಯಕ್ಷ ರಮೇಶಗೌಡ ಪಾಟೀಲ, ಸಮಾಜದ ಯುವ ಮುಖಂಡರಾದ ಸೋಮು ಹಕ್ಕಂಡಿ, ಮಂಜುನಾಥ ಮುಧೋಳ, ವಿನಾಯಕ ಕರಬಿಷ್ಠಿ, ಶರಣಪ್ಪ ಕಲ್ಲೂರ, ದೇವಪ್ಪ ಇಟಗಿ, ನಾಗರಾಜ ಮುರುಡಿ, ಸಿದ್ದು ದೇಸಾಯಿ, ಪ್ರಭು ಕೊರ್ಲಹಳ್ಳಿ, ಶಿವಕುಮಾರ ಬ್ಯಾಳಿ, ಪ್ರಶಾಂತ ಗುಡದಪ್ಪನವರ, ಪ್ರಕಾಶ ಕೊತಂಬರಿ, ಮುತ್ತು ಅಳವಂಡಿ, ಗಂಗಾಧರ ಬಳಿಗಾರ, ವಿರೇಶ ಎನ್, ಸೋಮು ಹಳ್ಳಿಕೇರಿ, ಮಲ್ಲಿಕಾರ್ಜುನ ಗುಡೂರ, ಧರ್ಮರಾಜ ಕೊಂಚಿಗೇರಿ ಸೇರಿದಂತೆ ಸಮಾಜದ ಹಿರಿಯರು, ಯುವಕರು, ಗಣ್ಯರು ಪಾಲ್ಗೊಂಡಿದ್ದರು.
ಮುಖ್ಯ ಅತಿಥಿಯಾಗಿ ಗದಗ ಜಿಲ್ಲಾ ಪಂಚಮಸಾಲಿ ಸಮಾಜದ ಯುವ ಘಟಕದ ಅಧ್ಯಕ್ಷ ಸಂತೋಷ ಅಕ್ಕಿ ಪಾಲ್ಗೊಂಡು, ಮುಂಡರಗಿಯು ಉತ್ಸಾಹಿ ಯುವ ಧುರೀಣ ರಾಜೇಶ ಅರಕಾಲ ಅವರನ್ನು ಮುಂಡರಗಿ ತಾಲೂಕಾ ಪಂಚಮಸಾಲಿ ಯುವ ಘಟಕದ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದ್ದು ಅವರು ಉಳಿದ ಪದಾಧಿಕಾರಿಗಳನ್ನು ನೇಮಕ ಮಾಡಿಕೊಳ್ಳಲು ಅಧಿಕಾರ ನೀಡಲಾಗಿದೆ ಎಂದರು.