ಮುಕ್ತಿಧಾಮ ಜೀರ್ಣೋದ್ಧರಕ್ಕೆ ಕೈಜೋಡಿಸಿ : ಡಾ. ಜಿ.ಕೆ. ಕಾಳೆ

0
muktidhama
Spread the love

ವಿಜಯಸಾಕ್ಷಿ ಸುದ್ದಿ, ನರೇಗಲ್ಲ : ಪಟ್ಟಣದ ಯಜ್ಞೋಪವೀತ ಸಮಾಜ ಬಾಂಧವರಿಗಾಗಿ ಇರುವ ಮುಕ್ತಿಧಾಮವು ಶಿಥಿಲಾವಸ್ಥೆಗೆ ಒಳಗಾಗಿದ್ದು, ಅದರ ಜೀರ್ಣೋದ್ಧಾರ ಕಾರ್ಯ ತುರ್ತಾಗಿ ಆಗಬೇಕಿದೆ. ಮಳೆಗಾಲ ಪ್ರಾರಂಭವಾಗುವುದರೊಳಗೆ ಈ ಕಾರ್ಯ ಮುಕ್ತಾಯಗೊಳ್ಳಬೇಕಿದೆ. ಆದ್ದರಿಂದ ಇಂದು ಈ ಸಭೆಯನ್ನು ಕರೆಯಲಾಗಿದೆ ಎಂದು ಡಾ. ಜಿ.ಕೆ. ಕಾಳೆ ಹೇಳಿದರು.

Advertisement

ಪಟ್ಟಣದ ಶ್ರೀ ಕಲ್ಮೇಶ್ವರ ದೇವಸ್ಥಾನದಲ್ಲಿ ಜರುಗಿದ ಪಟ್ಟಣದ ಯಜ್ಞೋಪವೀತ ಸಮಾಜ ಬಾಂಧವರ ಸಭೆಯಲ್ಲಿ ಅವರು ಮಾತನಾಡಿದರು.

2001ರಲ್ಲಿ ಮೋರಂ ಕ್ವಾರಿಯಲ್ಲಿ ಸ್ಮಶಾನಕ್ಕೆಂದು 2 ಗುಂಟೆ ಜಾಗೆಯನ್ನು ಪಡೆಯಲಾಗಿತ್ತು. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸಮಿತಿಯವರು ಅಲ್ಲಿ ಮುಕ್ತಿಧಾಮ ನಿರ್ಮಾಣಕ್ಕೆಂದು ಆಗ 35 ಸಾವಿರ ರೂ.ಗಳನ್ನು ನೀಡಿ ಸಹಕರಿಸಿದರು. ಸಂಸತ್ ಸದಸ್ಯರಾಗಿದ್ದ ಆರ್.ಎಸ್. ಪಾಟೀಲರೂ ಸಹ 50 ಸಾವಿರ ರೂಪಾಯಿಗಳ ಅನುದಾನವನ್ನು ನೀಡಿದ್ದರು. ಯಜ್ಞೋಪವೀತ ಸಮಾಜದ ಬಾಂಧವರ ಸಹಕಾರದಿಂದಲೂ ಈ ಮುಕ್ತಿಧಾಮ ಕಟ್ಟಡ ತಲೆ ಎತ್ತಿ ನಿಲ್ಲಲು ಕಾರಣವಾಗಿದೆ.

ಈಗ ಮುಕ್ತಿಧಾಮವು ದುರಸ್ತಿಗೆ ಬಂದಿರುವುದರಿಂದ ನಾವು ಶೀಘ್ರವೇ ಕಾರ್ಯ ಪ್ರವೃತ್ತರಾಗಬೇಕಿದೆ. ಈಗಾಗಲೇ ಇಲ್ಲಿ ಶವ ದಹನಕ್ಕೆ ಕಬ್ಬಿಣದ ಚೌಕಟ್ಟನ್ನು ನಿರ್ಮಿಸಿ ಅಳವಡಿಸಿದ್ದು, ಇನ್ನಷ್ಟು ಅಭಿವೃದ್ಧಿ ಕಾರ್ಯಗಳನ್ನು ತುರ್ತಾಗಿ ಕೈಗೊಳ್ಳಬೇಕಿದೆ. ಆದ್ದರಿಂದ ಯಜ್ಞೋಪವೀತ ಸಮಾಜದ ಎಲ್ಲರೂ ಈ ಕಾರ್ಯಕ್ಕೆ ಕೈಗೂಡಿಸಿ ಸಹಕರಿಸಬೇಕೆಂದು ಹೇಳಿದರು.

ಹಿರಿಯರಾದ ವೆಂಕಣ್ಣ ಕುಲಕರ್ಣಿ(ವೈದ್ಯ) ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ಸಭೆಯಲ್ಲಿ ವೈಶ್ಯ ಸಮಾಜದ ಅಧ್ಯಕ್ಷ ರಾಮಣ್ಣ ನವಲಿ, ಚಂದ್ರಹಾಸ ಇಲ್ಲೂರ, ಕಾಳಮ್ಮ ದೇವಸ್ಥಾನದ ಅಧ್ಯಕ್ಷ ನಾರಾಯಣ ವಡ್ಡಟ್ಟಿ, ವಿ.ಆರ್. ಗ್ರಾಮಪುರೋಹಿತ, ಎನ್.ಎನ್. ಗ್ರಾಮಪುರೋಹಿತ, ಎ.ಜಿ. ಕುಲಕರ್ಣಿ, ವಿ.ಯು. ಕುಲಕರ್ಣಿ, ಎ.ಕೆ. ಕುಲಕರ್ಣಿ, ಜಿ.ವಿ. ಕುಲಕರ್ಣಿ, ಪಿ.ಎಸ್. ಗ್ರಾಮಪುರೋಹಿತ, ಎ.ಎಲ್. ಕುಲಕರ್ಣಿ, ಎ.ಎ. ಕುಲಕರ್ಣಿ, ಎ.ಬಿ. ಕುಲಕರ್ಣಿ, ಎಸ್.ಆರ್. ಕುಲಕರ್ಣಿ, ಆರ್.ಡಿ. ಕುಲಕರ್ಣಿ, ವಿ.ಜಿ. ಗ್ರಾಮಪುರೋಹಿತ ಸೇರಿದಂತೆ ಇನ್ನೂ ಅನೇಕರಿದ್ದರು.
ಎಸ್.ಎಚ್. ಕುಲಕರ್ಣಿ ಮತ್ತು ಎಸ್.ಎಸ್. ಅಂಬೇಕರ ನಿರ್ವಹಿಸಿದರು.

ಮುಕ್ತಿ ಧಾಮ ಜೀರ್ಣೋದ್ಧಾರ ಸಮಿತಿ
ಅಧ್ಯಕ್ಷರು-ಗುರುರಾಜ ವಿ.ಕುಲಕರ್ಣಿ, ಉಪಾಧ್ಯಕ್ಷರು-ವೀರಭದ್ರ ಇಲ್ಲೂರ, ಕೋಶಾಧ್ಯಕ್ಷರು-ವಿನಾಯಕ ಗ್ರಾಮಪುರೋಹಿತ, ಕಾರ್ಯದರ್ಶಿ-ಆದರ್ಶ ಕುಲಕರ್ಣಿ, ಸಹ ಕಾರ್ಯದರ್ಶಿ-ಮುತ್ತಪ್ಪ ಹೂಲಗೇರಿ, ಪೋಷಕರು-ಡಾ. ಜಿ.ಕೆ. ಕಾಳೆ, ರಾಮಣ್ಣ ನವಲಿ, ನಾರಾಯಣ ವಡ್ಡಟ್ಟಿ, ಶ್ರೀಪಾದಭಟ್ಟ ಜೋಷಿ, ಹುಕುಮಚಂದ ರಾಜಪುರೋಹಿತ, ಶ್ರೀಪಾದ ಕುಲಕರ್ಣಿ.


Spread the love

LEAVE A REPLY

Please enter your comment!
Please enter your name here