ವಿಜಯಸಾಕ್ಷಿ ಸುದ್ದಿ, ಗದಗ: ಕರ್ನಾಟಕ ಸರ್ಕಾರದ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯಿಂದ ಪ್ರಶಸ್ತಿ ಪಡೆದ ಪತ್ರಕರ್ತ ರಘು ಕೊಪ್ಪರ ಮತ್ತು ಅವರ ಧರ್ಮಪತ್ನಿ ಶಿಲ್ಪಾ ಕೊಪ್ಪರ ಅವರಿಗೆ ರವೀಂದ್ರ ಕೊಪ್ಪರ ಅಭಿಮಾನಿ ಬಳಗದಿಂದ ಸನ್ಮಾನಿಸಲಾಯಿತು.
ಭಾರತೀಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ. ಎಸ್.ವೈ. ಚಿಕ್ಕಟ್ಟಿ, ಹಾಲುಮತ ಮಹಾಸಭಾದ ರಾಜ್ಯಾಧ್ಯಕ್ಷ ರುದ್ರಣ್ಣ ಗುಳಗುಳಿ, ಪ್ರೊ. ರಮಾಕಾಂತ ದೊಡ್ಡಮನಿ, ಶ್ರೀರಾಮ ಸೇನೆ ಮುಖ್ಯಸ್ಥ ರಾಜು ಖಾನಪ್ಪನವರ, ನಗರಸಭಾ ಸದಸ್ಯ ಅನಿಲ್ ಅಬ್ಬಿಗೇರಿ, ಪ್ರೊ. ವಿ.ಬಿ. ತಾಳಿ, ಅಮೀರ ನಾಯಕ, ಮಲ್ಲಿಕಾರ್ಜುನ ಖಂಡೆಮ್ಮನವರ, ಮೌನೇಶ ಭಜಂತ್ರಿ, ಸಂಡೂರಿನ ರವೀಂದ್ರ ಕುಲಕರ್ಣಿ, ವಾದಿರಾಜ ಕೌಜಲಗಿ, ಯಮುನವ್ವ ಭಜಂತ್ರಿ ಮುಂತಾದವರು ಉಪಸ್ಥಿತರಿದ್ದರು.



