ವಿಜಯಸಾಕ್ಷಿ ಸುದ್ದಿ, ಗದಗ: ಮಹಾಮಾನವತಾವಾದಿ, ಜಗಜ್ಯೋತಿ, ಕರ್ನಾಟಕದ ಸಾಂಸ್ಕೃತಿಕ ನಾಯಕ, ವಿಶ್ವಗುರು ಬಸವಣ್ಣನವರು ಕ್ರಿ.ಶ. 1167ರಲ್ಲಿ ಕಪ್ಪಡಿ ಸಂಗಮನಾಥನಲ್ಲಿ ಶ್ರಾವಣ ಶುದ್ಧ ಪಂಚಮಿಯಂದು ಮಹಾಬಯಲಿನಲ್ಲಿ ಬಯಲಾಗಿ ಇಂದಿಗೆ 858 ವರ್ಷಗಳಾದವು. ಆ ಬಯಲ ಸ್ವರೂಪರಾದ ದಿನವನ್ನೇ `ಬಸವ ಪಂಚಮಿ’ಯನ್ನಾಗಿ ಬಸವ ಭಕ್ತರು, ಬಸವತತ್ವಾನಯಾಯಿಗಳು ನಾಡಿನಾದ್ಯಂತ ಆಚರಿಸುತ್ತಾ ಬಂದಿದ್ದಾರೆ.
ಈ ಹಿನ್ನೆಲೆಯಲ್ಲಿ ಜುಲೈ 29ರ ಮುಂಜಾನೆ 10 ಗಂಟೆಗೆ ವಿಶ್ವ ಕಲ್ಯಾಣ ಸಂಸ್ಥೆ, ಗದಗ ಭುವನೇಶ್ವರಿ ವಿಶೇಷ ಅಗತ್ಯವುಳ್ಳ ಮಕ್ಕಳ ಶಾಲೆ, ಶ್ರೀ ಸಿದ್ಧಲಿಂಗ ನಗರ (ಹುಡ್ಕೋ ವಾಟರ್ ಟ್ಯಾಂಕ್ ಹತ್ತಿರ,) ಗದಗ ಇಲ್ಲಿಯ ವಿದ್ಯಾರ್ಥಿಗಳಿಗೆ ಹಾಲು-ಬಿಸ್ಕೆಟ್ ವಿತರಿಸಲಾಗುವುದು. ನಂತರ 11 ಗಂಟೆಗೆ ಜಿ¯್ಲÁಸ್ಪತ್ರೆಯ ಒಳರೋಗಿಗಳಿಗೆ ಹಾಲು ವಿತರಣೆ, 12 ಗಂಟೆಗೆ ಭೀಷ್ಮ ಕೆರೆಯಲ್ಲಿರುವ ಶ್ರೀ ಬಸವೇಶ್ವರ ಮೂರ್ತಿ ಆವರಣದಲ್ಲಿ ಸಾಮೂಹಿಕ ವಚನ ಪ್ರಾರ್ಥನೆ ಜರುಗಲಿದೆ. ಈ ಎಲ್ಲ ಕಾರ್ಯಕ್ರಮದ ಸಾನ್ನಿಧ್ಯವನ್ನು ಪೂಜ್ಯ ಜಗದ್ಗುರು ತೋಂಟದ ಡಾ. ಸಿದ್ಧರಾಮ ಮಹಾಸ್ವಾಮಿಗಳು ವಹಿಸಿಕೊಳ್ಳುವರು. ಸಮ್ಮುಖವನ್ನು ಪೂಜ್ಯ ಡಾ. ಮಹಾಂತ ಬಸವಲಿಂಗ ಸ್ವಾಮಿಗಳು ಬೇಲೂರು ಇವರು ವಹಿಸುವರು.
ಬಸವದಳ-ಬಸವಕೇಂದ್ರ, ಲಿಂಗಾಯತ ಪ್ರಗತಿಶೀಲ ಸಂಘ, ಜಗದ್ಗುರು ತೋಂಟದಾರ್ಯ ಜಾತ್ರಾಮಹೋತ್ಸವ ಸಮಿತಿ, ಶರಣ ಸಾಹಿತ್ಯ ಪರಿಷತ್ತು, ಜಾಗತಿಕ ಲಿಂಗಾಯತ ಮಹಾಸಭೆ ಹಾಗೂ ಬಸಪರ ಸಂಘಟನೆಗಳ ಸದಸ್ಯರು ಜು.29ರಂದು ಮುಂಜಾನೆ 9 ಗಂಟೆಗೆ ಶ್ರೀಮಠಕ್ಕೆ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಪ್ರಕಾಶ ಅಸುಂಡಿಯವರು ವಿನಂತಿಸಿದ್ದಾರೆ.



