ಬೆಂಗಳೂರು:- ಬಿಎಂಟಿಸಿ ಬಸ್ ಗೆ ಜುಪಿಟರ್ ಬೈಕ್ ಡಿಕ್ಕಿ ಹೊಡೆದು ಯುವತಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಗರದ ಉಲ್ಲಾಳ ಬಳಿಯ 100 ಫಿಟ್ ರೋಡ್ ಬಳಿ ಜರುಗಿದೆ.
Advertisement
ಸೊನ್ನೆನಾಹಳ್ಳಿಯ ಮಾರುತಿ ನಗರದ ನಿವಾಸಿ ಮೋನಿಕಾ ಮೃತ ಯುವತಿ ಎಂದು ತಿಳಿದು ಬಂದಿದೆ.
Tvs Jupiter ಸ್ಕೂಟರ್ ನಲ್ಲಿ ಕೆಲಸಕ್ಕೆ ಹೋಗುವ ವೇಳೆ ಬಸ್ ಗೆ ಡಿಕ್ಕಿ ಹೊಡೆದು ಯುವತಿ ಬಲಕ್ಕೆ ಬಿದ್ದಿದ್ದಾರೆ. ಬೀಳುತ್ತಿದ್ದಂತೆ ಯುವತಿ ತಲೆ ಮೇಲೆ ಕಾರು ಹರಿದಿದೆ. ಈ ಹಿನ್ನೆಲೆ ಯುವತಿ ತಲೆ ಛಿದ್ರ ಛಿದ್ರವಾಗಿದೆ.
ಹೆಲ್ಮೆಟ್ ಹಾಕಿದ್ರು ಯುವತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ರಿಂಗ್ ರೋಡ್ ನಲ್ಲಿರುವ ರಾಯಲ್ ಎನ್ ಫೀಲ್ಡ್ ಬೈಕ್ ಷೋ ರೂಂ ನಲ್ಲಿ ಯುವತಿ HR ಆಗಿ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.