ಜಸ್ಟ್ ಮೂರುವರೆ ಸಾವಿರಕ್ಕೆ ಬಿತ್ತು ಯುವಕನ ಹೆಣ: 8 ಮಂದಿ ಅರೆಸ್ಟ್, ಅಷ್ಟಕ್ಕೂ ಆಗಿದ್ದೇನು!?

0
Spread the love

ನೆಲಮಂಗಲ:- ಜಸ್ಟ್ ಮೂರುವರೆ ಸಾವಿರಕ್ಕೆ ಯುವಕನನ್ನು ಕಿಡ್ನ್ಯಾಪ್ ಮಾಡಿ ಕೊಲೆಗೈದಿರುವ ಘಟನೆ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಜರುಗಿದೆ.

Advertisement

ಘಟನೆ ಸಂಬಂಧ ಎಂಟು ಮಂದಿ ಆರೋಪಿಗಳನ್ನು ಅರೆಸ್ಟ್ ಮಾಡಲಾಗಿದೆ. ಬಂಧಿತರನ್ನು 23 ವರ್ಷದ ಮಹಮ್ಮದ್ ಏಸನ್, 23 ವರ್ಷದ ರೋಷನ್ ಜಮೀರ್, 24 ವರ್ಷದ ಗಣೇಶ್, 20 ವರ್ಷದ ನಂದಕುಮಾರ್, 24 ವರ್ಷದ ಹೆಸರಘಟ್ಟದ ವಿಶ್ವ, 30 ವರ್ಷದ ಯಲಹಂಕದ ನಾಗೇಶ್, 26 ವರ್ಷದ ಮನುಕುಮಾರ್, ಮತ್ತು 17 ವರ್ಷದ ಅಪ್ರಾಪ್ತರು ಎಂದು ಗುರುತಿಸಲಾಗಿದೆ.

ಪುಡಿಗಾಸಿನಗಾಗಿ ಈ ಎಂಟು ಜನ ಒಂದು ಕಿಡ್ನ್ಯಾಪ್ ಮಾಡಿ, ಮನೆಯೊಂದರಲ್ಲಿ ಕೊಲೆ ಮಾಡಿದ್ದಾರೆ. ಯಾರಿಗೂ ಗೊತ್ತಾಗಬಾರದು ಅಂತ ನೂರಾರು ‌ಕಿಲೋಮೀಟರ್‌ ದೂರದಲ್ಲಿರುವ ಅರಣ್ಯ ಪ್ರದೇಶದಲ್ಲಿ ಶವವನ್ನು ‌ಬಿಸಾಡಿದ್ದಾರೆ.

ಬಿಹಾರ‌ ಮೂಲದ 24 ವರ್ಷದ ಅಖಿಲೇಶ್‌ ನೆಲಮಂಗಲದ ಖಾಸಗಿ‌ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಮಾಚೋಹಳ್ಳಿಯ ಮಹಮ್ಮದ್ ಏಸನ್ ಬಳಿ ಕೇವಲ‌ ಮೂರುವರೆ ಸಾವಿರ ರೂ. ಹಣವನ್ನು ಸಾಲವಾಗಿ ಪಡೆದುಕೊಂಡಿದ್ದ. ಆದರೆ ಗಲಾಟೆ ವಿಕೋಪಕ್ಕೆ ತಿರುಗಿ ಕಿಡ್ನ್ಯಾಪ್​ ಮಾಡಿ ಕೊಲೆ ಮಾಡಿದ್ದಾರೆ.

ಅಕ್ಟೋಬರ್ 23 ರಂದು ಕುರಿಗಾಹಿಗಳಿಗೆ ಅರಣ್ಯ ಪ್ರದೇಶದಲ್ಲಿ ಕೊಳೆತ ಸ್ಥಿತಿಯಲ್ಲಿದ್ದ ಶವ ನೋಡಿ ಕೂಡಲೇ ವಿಜಯನಗರದ ಹೊಸಹಳ್ಳಿ ಪೊಲೀಸರಿಗೆ ಮಾಹಿತಿ‌ ನೀಡಿದ್ದಾರೆ.

ಮತ್ತೊಂದೆಡೆ ಅಕ್ಟೋಬರ್ 21 ರಂದು ಅಖಿಲೇಶ್ ಪೋಷಕರು ತಮ್ಮ ಮಗ ನಾಪತ್ತೆಯಾಗಿರುವುದಾಗಿ ಮಾದನಾಯಕನಹಳ್ಳಿ ಪೊಲೀಸರಿಗೆ ದೂರು ನೀಡಿದ್ದಾರೆ. ಹಲವು ಆಯಾಮಗಳಲ್ಲಿ ತನಿಖೆ ನಡೆಸಿದ ಪೊಲೀಸರಿಗೆ ಫೋನ್ ಕಾಲ್ ಸಿಡಿಆರ್ ಮೂಲಕ ಆರೋಪಿಗಳು ಬಲೆಗೆ ಬಿದ್ದಿದ್ದಾರೆ.

ಬರೊಬ್ಬರಿ ಎಂಟು ಜನ ಕಿಡ್ನ್ಯಾಪ್, ಕೊಲೆ, ಶವ ಸಾಗಣೆಯಲ್ಲಿ ಭಾಗಿಯಾಗಿರುವುದು ತನಿಖೆಯ ವೇಳೆ ಆರೋಪಿಗಳು ಬಾಯಿಬಿಟ್ಟಿದ್ದಾರೆ.


Spread the love

LEAVE A REPLY

Please enter your comment!
Please enter your name here