ಜಸ್ಟ್ 6 ನಿಮಿಷ: ವಿರಾಟ್‌ ದಾಖಲೆ ಬ್ರೇಕ್ ಮಾಡಿದ ಪಾಂಡ್ಯ!

0
Spread the love

ಟೀಮ್ ಇಂಡಿಯಾದ ಆಟಗಾರ ವಿರಾಟ್‌ ಕೊಹ್ಲಿ ಅವರ ಸೋಶಿಯಲ್‌ ಮೀಡಿಯಾ ದಾಖಲೆಯನ್ನು ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಬ್ರೇಕ್ ಮಾಡಿದ್ದಾರೆ.

Advertisement

ಸೋಷಿಯಲ್ ಮೀಡಿಯಾಗಳಲ್ಲಿ ಒಂದಾದ ಇನ್‌ಸ್ಟಾಗ್ರಾಮ್‌ನಲ್ಲಿ ಅತಿ ಕಡಿಮೆ ಅವಧಿಯಲ್ಲಿ 10 ಲಕ್ಷ ಲೈಕ್‌ ಪಡೆದ ಆಟಗಾರ ಎಂಬ ಹೆಗ್ಗಳಿಕೆಗೆ ಪಾಂಡ್ಯ ಪಾತ್ರರಾಗಿದ್ದಾರೆ.

ಐಸಿಸಿ ಚಾಂಪಿಯನ್ಸ್‌ ಟ್ರೋಫಿಯನ್ನು ಗೆದ್ದ ಬಳಿಕ ಪಾಂಡ್ಯ ಕ್ರಿಕೆಟ್‌ ಪಿಚ್‌ನಲ್ಲಿ ಟ್ರೋಫಿಯನ್ನು ಇರಿಸಿ ಪೋಸ್‌ ನೀಡಿದ್ದರು. ಈ ಫೋಟೋಗೆ ಕೇವಲ 6 ನಿಮಿಷದಲ್ಲೇ 10 ಲಕ್ಷ ಜನ ಲೈಕ್‌ ಮಾಡಿದ್ದರು.

ಈ ಹಿಂದೆ ವಿರಾಟ್‌ ಕೊಹ್ಲಿ ಟಿ20 ವಿಶ್ವಕಪ್‌ ಗೆದ್ದ ಬಳಿಕ ಅಪ್ಲೋಡ್‌ ಮಾಡಿದ ಫೋಟೋಗೆ 7 ನಿಮಿಷದಲ್ಲಿ 10 ಲಕ್ಷ ಲೈಕ್‌ ಸಿಕ್ಕಿತ್ತು. ಇದೀಗ ಈ ದಾಖಲೆಯನ್ನು ಬ್ರೇಕ್ ಮಾಡುವಲ್ಲಿ ಹಾರ್ದಿಕ್ ಪಾಂಡ್ಯ ಯಶಸ್ವಿಯಾಗಿದ್ದಾರೆ.


Spread the love

LEAVE A REPLY

Please enter your comment!
Please enter your name here