
ಗಾಂಧಿನಗರ:- ಶಾಂತಿಯುತವಾಗಿ ಬದುಕಬೇಕಾದ್ರೆ ರೊಟ್ಟಿ ತಿನ್ನಿ, ಇಲ್ಲದಿದ್ರೆ ನಮ್ಮ ಬುಲೆಟ್‌ಗಳು ಯಾವಾಗಲೂ ರೆಡಿ ಇರುತ್ತೆ ಎಂದು ಪಾಕ್ ಸರ್ಕಾರಕ್ಕೆ ಪ್ರಧಾನಿ ಮೋದಿ ವಾರ್ನಿಂಗ್ ಕೊಟ್ಟಿದ್ದಾರೆ.
ರೋಡ್ ಶೋ ಬಳಿಕ ಗುಜರಾತ್‌ನ ಭುಜ್‌ನಲ್ಲಿ ನಡೆದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಪಾಕಿಸ್ತಾನ ಸರ್ಕಾರ ಮತ್ತು ಸೇನೆಗೆ ತೀಕ್ಷ್ಣ ಎಚ್ಚರಿಕೆ ನೀಡಿದರು. ʻನೀವು ಶಾಂತಿಯುತ ಜೀವನ ಬಯಸಿದ್ರೆ ನಿಮ್ಮ ಬ್ರೆಡ್ ತಿಂದು ಸುಮ್ಮನಿರಿ, ಇಲ್ಲದಿದ್ರೆ ನನ್ನ ಬುಲೆಟ್‌ಗಳು ಯಾವಾಗಲೂ ಸಿದ್ಧವಾಗಿರುತ್ತೆ. ಯಾವುದು ಬೇಕು ನೀವೇ ಆಯ್ಕೆ ಮಾಡಿಕೊಳ್ಳಿ ಅಂತ ಪಾಕ್‌ಗೆ ವಾರ್ನಿಂಗ್ ಕೊಟ್ಟರು.
ಭಾಷಣದ ವೇಳೆ ಭಯೋತ್ಪಾದನೆಯ ವಿರುದ್ಧ ಭಾರತದ ಶೂನ್ಯ ಸಹಿಷ್ಣುತಾ ನೀತಿ ಉಲ್ಲೇಖಿಸಿದ ಪ್ರಧಾನಿ, ʻನಮ್ಮ ರಕ್ತ ಚೆಲ್ಲಲು ಪ್ರಯತ್ನಿಸುವವರಿಗೆ ಅವರದ್ದೇ ಭಾಷೆಯಲ್ಲಿ ಉತ್ತರಿಸಲು ಭಾರತ ಸಿದ್ಧವಿದೆ. ಭಾರತದ ಮೇಲೆ ಕಣ್ಣುಹಾಕುವವರು ಬೆಲೆ ತೆರಲೇಬೇಕಾಗುತ್ತದೆ ಎಂದರಲ್ಲದೇ, ಭಯೋತ್ಪಾದನೆಯನ್ನ ಬುಡಸಮೇತ ನಿರ್ಮೂಲನೆ ಮಾಡುವುದು ಮತ್ತು ಮಾನವೀಯತೆಯನ್ನ ರಕ್ಷಿಸುವುದು ಆಪರೇಷನ್ ಸಿಂಧೂರ ಕಾರ್ಯಾಚರಣೆಯ ಉದ್ದೇಶವಾಗಿದೆ ಎಂದು ಹೇಳಿದರು.
ಮುಂದುವರಿದು.. ಭಯೋತ್ಪಾದನೆಯನ್ನ ಕೈಬಿಡದಿದ್ದರೆ ನಿಮ್ಮ ಮಕ್ಕಳ ಭವಿಷ್ಯ ಕತ್ತಲೆಯಲ್ಲಿ ಮುಳುಗುತ್ತದೆ ಎಂದು ಪಾಕ್ ಜನತೆಗೆ ಮೋದಿ ಮನವಿ ಮಾಡಿದರಲ್ಲದೇ ಭಯೋತ್ಪಾದನೆ ಪಾಕಿಸ್ತಾನಕ್ಕೆ ವಿನಾಶಕಾರಿ ಎಂಬುದನ್ನ ಪಾಕ್ ನಾಗರಿಕರಿಗೆ ಮತ್ತೊಮ್ಮೆ ಮನವರಿಗೆ ಮಾಡಿಕೊಟ್ಟರು.