ವಿಜಯಸಾಕ್ಷಿ ಸುದ್ದಿ, ರೋಣ: ರಾಜ್ಯ ಸರಕಾರ ಜಾರಿಗೊಳಿಸಿದ ಒಳ ಮಿಸಲಾತಿಯಿಂದ ಎಲ್ಲ ಸಮುದಾಯಗಳಿಗೂ ನ್ಯಾಯ ಸಿಕ್ಕಿದೆ ಎಂದು ಕೆಪಿಸಿಸಿ ಸದಸ್ಯ, ರೋಣ-ಗಜೇಂದ್ರಗಡ ತಾಲೂಕಿನ ಛಲವಾದಿ ಸಮಾಜದ ಅಧ್ಯಕ್ಷ ಸಂಜಯ ದೊಡ್ಡಮನಿ ಹೇಳಿದರು.
ಅವರು ಮಂಗಳವಾರ ಸಮಾಜದ ಮುಖಂಡರೊಂದಿಗೆ ಶಾಸಕ ಜಿ.ಎಸ್. ಪಾಟೀಲರನ್ನು ಸನ್ಮಾನಿಸಿ ಮಾತನಾಡಿದರು.
ಒಳ ಮಿಸಲಾತಿ ಜಾರಿಯಾಗಬೇಕು ಎನ್ನುವುದು 35 ವರ್ಷಗಳ ನಿರಂತರ ಹೋರಾಟವಾಗಿತ್ತು. ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಯಾವ ಸಮುದಾಯಕ್ಕೂ ಅನ್ಯಾಯವಾಗದ ರೀತಿಯಲ್ಲಿ ನ್ಯಾಯ ಸಮ್ಮತವಾಗಿ ಮೀಸಲಾತಿಯನ್ನು ಹಂಚಿಕೆ ಮಾಡುವ ಮೂಲಕ ಸಂವಿಧಾನದ ಮೂಲ ತತ್ವಗಳನ್ನು ಎತ್ತಿ ಹಿಡಿದಿದೆ ಎಂದರು.
ಮುಖಂಡ ಶರೀಪ ಬಿಳೆಯಲಿ ಮಾತನಾಡಿ, ರಾಜ್ಯ ಸರಕಾರದ ನಿರ್ಧಾರವನ್ನು ಛಲವಾದಿ ಸಮಾಜ ತುಂಬು ಮನಸ್ಸಿನಿಂದ ಸ್ವಾಗತಿಸಿದೆ. ಮೀಸಲಾತಿ ಹಂಚಿಕೆಯಲ್ಲಿ ಸರಕಾರ ಸಮಾನತೆಯನ್ನು ತೋರಿದ್ದು, ಇಲ್ಲಿ ಯಾವ ಸಮಾಜಕ್ಕೂ ತೊಂದರೆಯಾಗಿಲ್ಲ. ಮುಖ್ಯವಾಗಿ ಒಳ ಮೀಸಲಾತಿ ಜಾರಿಯ ಲಾಭ ನಮ್ಮ ಪೀಳಿಗೆಗೆ ಸಹಾಯಕವಾಗಲಿದೆ. ಸಮಾಜದ ಬಂಧುಗಳು ಸರಕಾರ ಜಾರಿಗೆ ತಂದಿರುವ ಮೀಸಲಾತಿ ಲಾಭವನ್ನು ಪಡೆದುಕೊಂಡು ನಾಡಿಗೆ, ದೇಶಕ್ಕೆ ತಮ್ಮ ಕೊಡುಗೆಯನ್ನು ನೀಡಬೇಕು ಎಂದರು.
ಇದೇ ಸಂದರ್ಭದಲ್ಲಿ ರೋಣ, ಗಜೇಂದ್ರಗಡ ತಾಲೂಕಿನಿಂದ ಆಗಮಿಸಿದ್ದ ಛಲವಾದಿ ಸಮಾಜದ ಮುಖಂಡರು ಶಾಸಕ ಜಿ.ಎಸ್. ಪಾಟೀಲರನ್ನು ಸನ್ಮಾನಿಸಿದರು.
ಕೆಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಐ.ಎಸ್. ಪಾಟೀಲ, ವಿ.ಬಿ. ಸೋಮನಕಟ್ಟಿಮಠ, ಯೂಸುಪ್ ಇಟಗಿ, ಬಸವರಾಜ ನವಲಗುಂದ, ಜಿಲ್ಲಾಧ್ಯಕ್ಷ ಆನಂದ ಶಿಂಗಾರಿ, ಪುರಸಭೆ ಉಪಾಧ್ಯಕ್ಷ ಹನ್ಮಂತಪ್ಪ ತಳ್ಳಿಕೇರಿ, ಹನ್ಮಂತಪ್ಪ ದೊಡ್ಡಮನಿ, ಶಿವಾನಂದ ಲಂಕೇಶ, ಮಾರುತಿ ಛಲವಾದಿ, ಮುತ್ತುರಾಜ ದೊಡ್ಡಮನಿ, ಶಂಕ್ರಪ್ಪ ಛಲವಾದಿ, ಸತ್ಯಪ್ಪ ಸತ್ಯಮ್ಮನವರ, ಬಸವರಾಜ ಬೆಟಗೇರಿ, ಸುರೇಶ ಬೆನಹಾಳ, ಶೇಖಪ್ಪ ತಿರಗಾರ, ಹನ್ಮಪ್ಪ ಕೊಳ್ಳಪ್ಪನವರ, ಫಕ್ಕಿರಪ್ಪ ಛಲವಾದಿ, ಬಾಳಪ್ಪ ಛಲವಾದಿ ಸೇರಿದಂತೆ ಸಮಾಜದ ಮುಖಂಡರು ಉಪಸ್ಥಿತರಿದ್ದರು.
ಕಾಂಗ್ರೆಸ್ ಪಕ್ಷ ಸಂವಿಧಾನದ ಅಡಿಯಲ್ಲಿ ಮತ್ತು ತತ್ವಗಳಲ್ಲಿ ನಂಬಿಕೆಯನ್ನು ಹೊಂದಿ ಎಲ್ಲ ವರ್ಗದ ಜನರಿಗೆ ಸಾಮಾಜಿಕ ನ್ಯಾಯ ಸಿಗಬೇಕು ಎಂಬ ದೃಢವಾದ ನಿಲುವು ಹೊಂದಿದೆ. ಯಾವುದೇ ಸಮಾಜಕ್ಕೆ ಅನ್ಯಾಯವಾಗಬಾರದು ಎಂಬ ಉದ್ದೇಶದಿಂದ ಒಳ ಮಿಸಲಾತಿಯನ್ನು ಜಾರಿಗೆ ತಂದಿದ್ದು, ಎಲ್ಲ ಸಮುದಾಯಗಳು ಒಪ್ಪಿಕೊಂಡಿರುವುದು ಸ್ವಾಗತರ್ಹ.
– ಜಿ.ಎಸ್. ಪಾಟೀಲ.
ಶಾಸಕರು, ರೋಣ.