HomeGadag Newsಕೆ.ಬಿ. ಬೆನಕನವಾರಿಗೆ `ಕನ್ನಡ ನುಡಿಸಿರಿ’ ಪ್ರಶಸ್ತಿ

ಕೆ.ಬಿ. ಬೆನಕನವಾರಿಗೆ `ಕನ್ನಡ ನುಡಿಸಿರಿ’ ಪ್ರಶಸ್ತಿ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ: ಧಾರವಾಡದ ಚೇತನ ಪ್ರತಿಷ್ಠಾನ ಇವರಿಂದ ಪ್ರತಿವರ್ಷ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕ ವೃತ್ತಿಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿ, ಅಮೋಘ ಸಾಧನೆ ಮಾಡಿದ ಕನ್ನಡ ಭಾಷಾ ಶಿಕ್ಷಕರನ್ನು ಹಾಗೂ ಕನ್ನಡ ನಾಡು-ನುಡಿಗೆ ಸೇವೆ ಸಲ್ಲಿಸಿ ಸಾಧನೆ ಮಾಡಿದ ಕನ್ನಡಿಗರನ್ನು ಗುರುತಿಸಿ ಕೊಡಮಾಡುವ ಕನ್ನಡ ನುಡಿಸಿರಿ’ ಪ್ರಶಸ್ತಿಗೆ ತಾಲೂಕಿನ ರಾಜೂರಿನ ಶ್ರೀ ಬಸವೇಶ್ವರ ಕಿರಿಯ ಪ್ರಾಥಮಿಕ ಶಾಲೆಯ ಪ್ರಧಾನ ಗುರುಗಳಾದ ಕೆ.ಬಿ. ಬೆನಕನವಾರಿ ಭಾಜನರಾಗಿದ್ದಾರೆ.

ದಾವಣಗೆರೆಯ ರೋಟರಿ ಬಾಲಭವನದಲ್ಲಿ ಅ.೨೬ರಂದು ಚೇತನ ಪ್ರತಿಷ್ಠಾನ ಆಯೋಜಿಸಿರುವ ದಾವಣಗೆರೆ ನುಡಿ ಸಡಗರ’ ಕಾರ್ಯಕ್ರಮದ ಕವಿಗೋಷ್ಠಿ, ಸರ್ವಾಧ್ಯಕ್ಷರೊಂದಿಗೆ ಸಂವಾದ, ನೃತ್ಯ, ಗೀತ ಗಾಯನ, ಹೆಚ್.ಎಸ್.ವಿ ನುಡಿಸಿರಿ ಪ್ರಶಸ್ತಿ, ಕನ್ನಡ ನುಡಿಸಿರಿ ಪ್ರಶಸ್ತಿ, ಶಿಕ್ಷಕ ರತ್ನ ರಾಜ್ಯಪ್ರಶಸ್ತಿ ಹಾಗೂ ಕರ್ನಾಟಕದ ಅತ್ಯುತ್ತಮ 5 ಶಾಲೆಗಳಿಗೆ ಹಮ್ಮಿಕೊಂಡಿರುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕೆ.ಬಿ. ಬೆನಕನವಾರಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

 


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!