ಬೆಂಗಳೂರು:- ರಾಜ್ಯ ಸರ್ಕಾರದ ಅಧಿಕಾರದಲ್ಲಿ ಎಐಸಿಸಿ ಜನರಲ್ ಸೆಕ್ರೆಟರಿ ಕೆ.ಸಿ.ವೇಣುಗೋಪಾಲ್ ಹಸ್ತಕ್ಷೇಪ ಮಾಡಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಕೋಗಿಲು ಬಳಿ ಅಕ್ರಮ ಲೇಔಟ್ ತೆರವು ವಿಚಾರದಲ್ಲಿ ವೇಣುಗೋಪಾಲ್ ಮಾಡಿದ್ದ ಟ್ವೀಟ್ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಎಐಸಿಸಿ ಜನರಲ್ ಸೆಕ್ರೆಟರಿ ಕೆ.ಸಿ.ವೇಣುಗೋಪಾಲ್ ಅವರು ರಾಜ್ಯ ಸರ್ಕಾರದ ಅಧಿಕಾರದಲ್ಲಿ ಹಸ್ತಕ್ಷೇಪ ಮಾಡಿಲ್ಲ. ಅವರು ಸಲಹೆ ನೀಡಿದ್ದಾರೆ. ಅವರಿಗೆ ಸಲಹೆ ನೀಡೋದಕ್ಕೆ ಎಲ್ಲಾ ಅಧಿಕಾರ ಇದೆ. ಏನಾದರೂ ಇದ್ದರೆ ನಾವು ಸಲಹೆ ಪಡೆದುಕೊಳ್ಳುತ್ತೇವೆ ಎಂದಿದ್ದಾರೆ
ನಾನು ಪರಿಶೀಲನೆ ಮಾಡಿದ್ದೇನೆ. ಅಲ್ಲಿ ಒಬ್ಬ ಹಲವರಿಂದ ಹಣ ಪಡೆದು ಶೆಡ್ ಹಾಕಿದ್ದಾನೆ. ಹೀಗಾಗಿ ನಾವು ನೋಟಿಸ್ ಕೊಟ್ಟಿದ್ದೇವೆ. ಅವರು ಲೋಕಲ್ ಜನ ಆಗಿದ್ರೆ ಬೇರೆ ಪರಿಹಾರ ನೀಡುವ ಬಗ್ಗೆ ಚರ್ಚೆ ನಡೆಯುತ್ತಿದೆ. ರಾಜೀವ್ ಗಾಂಧಿ ಹೌಸಿಂಗ್ ಸ್ಕೀಮ್‌ನಲ್ಲಿ ಪರಿಹಾರ ನೀಡುತ್ತೇವೆ. ವೇಣುಗೋಪಾಲ್ ಅವರಿಗೆ ಸಲಹೆ ನೀಡಲು ಹಕ್ಕಿದೆ. ಬಿಜೆಪಿ ನಾಯಕರು ಸಲಹೆ ನೀಡಿಲ್ವಾ? ಅನೇಕ ವಿಷಯದಲ್ಲಿ ಸಲಹೆ ನೀಡಿದ್ದಾರೆ ಅವರಿಗೆ ಹಕ್ಕಿದೆ ಎಂದು ಹೇಳಿದ್ದಾರೆ.



