ಕೆ.ಎಚ್. ಪಾಟೀಲ ಹೆಸರಿನ ಸಹಕಾರ ವಿಶ್ವವಿದ್ಯಾಲಯ ಸ್ಥಾಪನೆಯಾಗಲಿ

0
Spread the love

ವಿಜಯಸಾಕ್ಷಿ ಸುದ್ದಿ, ಹುಬಳ್ಳಿ: ಸಹಕಾರ ಕ್ಷೇತ್ರದಿಂದ ಮಾತ್ರ ಸಮ ಸಮಾಜ ನಿರ್ಮಾಣ ಸಾಧ್ಯ. ಈ ಕ್ಷೇತ್ರದ ಬಲಪಡಿಸಲು ಒಂದು ವಿಶ್ವವಿದ್ಯಾಲಯ ಸ್ಥಾಪಿಸಬೇಕು ಮತ್ತು ಅದಕ್ಕೆ ಪ್ರೇರಕ ಶಕ್ತಿಯಾಗಿರುವ ಕೆ.ಎಚ್. ಪಾಟೀಲರ ಹೆಸರನ್ನಿಡಬೇಕೆಂದು ಮುಳ್ಳಹಳ್ಳಿಯ ಶ್ರೀ ಚೆನ್ನವೀರೇಶ್ವರ ವಿರಕ್ತಮಠದ ಶ್ರೀ ಮ.ನಿ.ಪ್ರ ಶಿವಯೋಗಿ ಮಹಾಸ್ವಾಮಿಗಳು ಸರ್ಕಾರಕ್ಕೆ ಸಲಹೆ ಮಾಡಿದರು.

Advertisement

ಇಂದಿರಾ ಗಾಜಿನ ಮನೆ ಆವರಣದಲ್ಲಿ ಜರುಗಿದ ಕೆ.ಎಚ್. ಪಾಟೀಲರ 33ನೇ ಪುಣ್ಯಸ್ಮರಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡುತ್ತಿದ್ದರು.

ಕೆ.ಎಚ್. ಪಾಟೀಲರು ಸಹಕಾರಕ್ಕಾಗಿ ದುಡಿದರು ಸಹಕಾರಕ್ಕಾಗಿ ಶ್ರಮಿಸಿದರು. ಅವರ ಉಸಿರು ಸಹಕಾರವಾಗಿತ್ತು. ಹೀಗಾಗಿ ಅವರ ಹೆಸರನ್ನು ವಿಶ್ವವಿದ್ಯಾಯಕ್ಕೆ ಇಟ್ಟರೆ ಸೂಕ್ತ. ಸಹಕಾರಿಗಳ ಜೀವನ ಗಾಥೆ ಇಂದಿನ ಮುಂದಿನ ಪೀಳಿಗೆಗೆ ಪರಿಚಯಸುವುದರ ಜೊತೆಗೆ ಸಧೃಡ ಸುಂದರ ಸಮಾಜ, ಸಹಕಾರ ವಿಶ್ವವಿದ್ಯಾಲಯ ಸ್ಥಾಪನೆ ಅಗತ್ಯ. ಇದಕ್ಕೆ ಎಲ್ಲ ಚಿಂತಕರು, ಸಹಕಾರಿಗಳು ದನಿಗೂಡಿಸಿ ಸರಕಾರದ ಮೇಲೆ ಒತ್ತಡ ತರಬೇಕೆಂದು ಅವರು ಮನವಿ ಮಾಡಿಕೊಂಡರು.

ಕೆ.ಎಚ್. ಪಾಟೀಲರು ಧೈರ್ಯಶಾಲಿ ರಾಜಕಾರಣಿ, ನೇರ ನಡೆ-ನ್ಮಡಿಯ, ನಿರ್ಭೀತಿಯ ನಾಯಕ. ಇಂತಹ ನಾಯಕರಿದ್ದರೇ ಎಂದು ಆಶ್ಚರ್ಯಪಡುವಂತಾಗಿದೆ. ಸಹಕಾರ ಕ್ಷೇತ್ರ ಇಂದು ಅಳಿವಿನ ಅಂಚಿನಲ್ಲಿದೆ. ಎಲ್ಲ ಕ್ಷೇತ್ರಗಳಲ್ಲಿಯೂ ವಿಶ್ವವಿದ್ಯಾಲಯುಗಳನ್ನು ಸ್ಥಾಪಿಸಲಾಗಿದೆ. ಅದರಂತೆ ಈ ಕ್ಷೇತ್ರದ ಉಳಿವಿಗೆ, ಹೆಚ್ಚಿನ ಅಧ್ಯಯನಕ್ಕೆ ಒಂದು ಪ್ರತ್ಯೇಕ ಸಹಕಾರ ವಿಶ್ವವಿದ್ಯಾಲಯ ಸ್ಥಾಪನೆ ಅಗತ್ಯವಾಗಿದೆ. ಉತ್ತರ ಕರ್ನಾಟಕದ ಬೆಳವಣಿಗೆಯಲ್ಲಿ ಸಹಕಾರ ಕ್ಷೇತ್ರದ ಪಾತ್ರ ದೊಡ್ಡದಿದೆ. ಕೆ.ಎಚ್. ಪಾಟೀಲರು ತಮಗೆ ದೊರೆತ ರಾಜಕೀಯ ಅಧಿಕಾರವನ್ನು ಸಹಕಾರ ಸಂಸ್ಥೆಗಳನ್ನು ಕಟ್ಟಲು ಬಳಸಿ, ಶೋಷಣೆ ಮುಕ್ತ ಸಮಾಜ ನಿರ್ಮಿಸಲು ಜೀವಿತದ ಕೊನೆಯುಸಿರಿರುವವರೆಗೆ ಶ್ರಮಿಸಿದ್ದಾರೆ ಎಂದರು.

ಹುಬ್ಬಳ್ಳಿ-ಧಾರವಾಡ ಮಹಾನಗರ ಸಭೆಯ ಪೂಜ್ಯ ಮಹಾಪೌರಾದ ರಾಮಣ್ಣ ಬಡಿಗೇರ ಮಾತನಾಡಿ, ಕೆ.ಎಚ್. ಪಾಟೀಲರ ಸಾರ್ವಜನಿಕ ಜೀವನ ನಮಗೆಲ್ಲ ಮಾದರಿಯಾಗಿದೆ. ನಾನು ಎಚ್.ಕೆ. ಪಾಟೀಲರಲ್ಲಿ ಕೆ.ಎಚ್. ಪಾಟೀಲರನ್ನು ಕಾಣುತ್ತಿದ್ದೇನೆ ಎಂದರು.

ಕ್ರಿಶ್ಚಿಯನ್ ಧರ್ಮಗುರುಗಳಾದ ಶ್ರೀ ಮೈಯರ್ ಮೆಮೋರಿಯಲ್ ಫಾಸ್ಟರ್ ರೇವರೆಂಡ್ ರಾಜು ಮೇದಗೊಪ್ಪ, ಮುಸ್ಲಿಂ ಧರ್ಮಗುರುಗಳಾದ ಮೌಲಾನಾ ಝಹರುದ್ಧಿನ ಖಾಜಿ ಮಾತನಾಡಿದರು. ಬುದ್ಧರಕ್ಕಿತ ಪ್ರೌಢಶಾಲೆಯ ವಿದ್ಯಾರ್ಥಿಗಳು ಹಾಗೂ ವಿಶ್ವಭಾರತಿ ಪ್ರೌಢಶಾಲೆಯ ವಿದ್ಯಾರ್ಥಿನಿಯರು ಪ್ರಾರ್ಥನೆ ಸಲ್ಲಿಸಿದರು.

ಕೆ.ಎಚ್. ಪಾಟೀಲ ಪ್ರತಿಷ್ಠಾನದ ಅಧ್ಯಕ್ಷ ಎ.ಎಂ. ಹಿಂಡಸಗೇರಿ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಂಸದ ಪ್ರೊ. ಐ.ಜಿ. ಸನದಿ ಹಾಗೂ ಮಾಜಿ ಶಾಸಕ ಮಲ್ಲಿಕಾರ್ಜುನ ಅಕ್ಕಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಆರಂಭದಲ್ಲಿ ವಿಶ್ವಬಾರತಿ ವಿದ್ಯಾರ್ಥಿನಿಯರು ವೇಮನ ಗೀತೆ ಹಾಡಿದರು. ಎಫ್.ಎಚ್. ಜಕ್ಕಪ್ಪನವರು ಸ್ವಾಗತಿಸಿದರು. ಮಹೇಂದ್ರ ಸಿಂಘಿ ಅತಿಥಿಗಳ ಪರಿಚಯ ಮಾಡಿದರು. ಸದಾನಂದ ಡಂಗನವರ ವಂದಿಸಿದರು. ವೇಮನ ವಿದ್ಯಾವರ್ಧಕ ಸಂಘದ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ, ಅಂಜುಮನ್ ಇಸ್ಲಾಂ ಸಂಸ್ಥೆಯ ವಿದ್ಯಾರ್ಥಿಗಳು, ಹಾಗೂ ಬುದ್ಧರಕ್ಕಿತ ಸಂಸ್ಥೆಯ ವಿದ್ಯಾರ್ಥಿಗಳು, ಪ್ರಿನ್ಸಿಪಾಲ್ ಎಸ್.ಬಿ. ಸಣಗೌಡರ ಕಾರ್ಯಕ್ರಮ ನಿರೂಪಿಸಿದರು.

ಸಮಾರಭಂದಲ್ಲಿ ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಶಾಕೀರ ಸನದಿ, ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಎಂ.ಎA. ಗೌಡರ, ಧಾರವಾಡ ಜಿಲ್ಲಾ ಗ್ಯಾರಂಟಿ ಸಮಿತಿಗಳ ಅಧ್ಯಕ್ಷ ಎಸ್.ಆರ್. ಪಾಟೀಲ. ಕೃಷಿ ವಿಶ್ವವಿದ್ಯಾಲಯದ ಸಿಂಡಿಕೇಟ್ ಅಧ್ಯಕ್ಷ ಡಾ. ವಾಯ್.ಬಿ. ಪಾಟೀಲ, ವೇಮನ ವಿದ್ಯಾವರ್ಧಕ ಸಂಘದ ಗೌರವ ಕಾರ್ಯದರ್ಶಿ ಆರ್.ಕೆ. ಪಾಟೀಲ, ಮಹೇಶ ಪಾಟೀಲ, ಕಾನೂನು ವಿ.ವಿ. ಸಿಂಡಿಕೇಟ್ ಸದಸ್ಯ ಪ್ರೊ. ಎಚ್.ವಿ. ಬೆಳಗಲಿ, ಡಾ. ಗೋವಿಂದ ಮಣ್ಣೂರ, ಡಿ.ಎಂ. ದೊಡಮನಿ, ಮಂಜುನಾಥ ಮುದರಡ್ಡಿ, ಮೋಹನ ಹಿರೇಮನಿ, ಈಶ್ವರ ಸಿರಸಂಗಿ, ಮನೋಜ ಪಾಟೀಲ, ಎ.ಡಿ. ಹೆಬ್ಬಳ್ಳಿ, ಬಿ.ಕೆ. ಲಕ್ಕಣ್ಣವರ, ಅಶೋಕ ಇಟಗಿ, ವೆಂಕಣ್ಣಾ ಕಿರೇಸೂರ, ಕೆ.ವಿ. ಹುಲಕೋಟಿ, ನವೀದ ಮುಲ್ಲಾ, ವ್ಹಿ.ಎಚ್. ಶಿರೋಳ, ಪ್ರೊ. ಜಿ.ಬಿ. ಕಲಕೋಟಿ, ಡಾ. ಉದುಪುಡಿ, ರಘು ಕೆಂಪಲಿAಗನಗೌಡರ, ಮೋಹನ ಕಲಾಲ, ಬಲವಂತ ಗುಂಡಮಿ, ವಿಜಯ ಲಕ್ಷೆö್ಮÃಶ್ವರ, ಕೃಷ್ಟಪ್ಪಾ ಲಕ್ಕಣ್ಣವರ, ಡಾ. ಆರ್.ವಾಯ್. ಹೊಸಮನಿ, ಗಂಗಾಧರ ದೊಡವಾಡ, ಶಿವಪ್ಪ ಮಸ್ಕಿ, ಪಾರಸಮಲ್ ಜೈನ, ಅಶೋಕ ಸೋಮಾಪುರ, ಗಿರಿಮಲ್ಲಪ್ಪ ಮತ್ತಿಕಟ್ಟಿ, ಗೋಪಣ್ಣ ನಲವಡಿ, ಹಾಸಿಂ ಹಿಂಡಸಗೇರಿ, ಉದಯ ಹೊಸಮನಿ, ಎಚ್.ಎಚ್. ಕಿರೇಸೂರ, ಬಸವರಾಜ ರಾಜೂರ, ಮಹೇಶ ಹೆಬ್ಬಾಳ, ಬಸವರಾಜ ಹೊಂಬಳ, ಬಸವರಾಜ ಕಳಕರಡ್ಡಿ, ಉಪಸ್ಥಿತರಿದ್ದರು.

ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಹಾಗೂ ಶಾಸಕ ಪ್ರಸಾದ ಅಬ್ಬಯ್ಯ ಮಾತನಾಡಿ, ಕೆ.ಎಚ್. ಪಾಟೀಲರು ನೇರ ನುಡಿಯ ನಿರ್ಭಿಡೆಯ ನಾಯಕರಾಗಿದ್ದರು. ಎಚ್.ಕೆ. ಪಾಟೀಲರು ಸೌಮ್ಯವಾದಿಗಳು. ಆದರೆ ಇಬ್ಬರೂ ನಾಯಕರು ರಾಜ್ಯವಷ್ಟೇ ಅಲ್ಲ, ರಾಷ್ಟçದ ಆಸ್ತಿಯಾಗಿದ್ದಾರೆ. ಇವರ ಜೊತೆಗೆ ಡಿ.ಆರ್. ಪಾಟೀಲರು ಸೇರಿದ್ದು ಮೂವರು ನಾಯಕರು ಮಹಾತ್ಮ ಗಾಂಧೀಜಿಯವರ ತತ್ವಗಳಲ್ಲಿ ನಂಬಿಕೆ ಇಟ್ಟು ಸಾರ್ವಜನಿಕ ಜೀವನದಲ್ಲಿ ಸೇವೆ ಸಲ್ಲಿಸಿದವರು ಎಂದರು.


Spread the love

LEAVE A REPLY

Please enter your comment!
Please enter your name here