HomeGadag Newsವೇತನ ತಾರತಮ್ಯ ಸರಿಪಡಿಸುವಂತೆ ಕೆ.ಹೆಚ್. ಪಾಟೀಲ ವೈದ್ಯಕೀಯ ಮಹಾವಿದ್ಯಾಲಯದ ಹೊರಗುತ್ತಿಗೆ ನೌಕರರ ಮನವಿ

ವೇತನ ತಾರತಮ್ಯ ಸರಿಪಡಿಸುವಂತೆ ಕೆ.ಹೆಚ್. ಪಾಟೀಲ ವೈದ್ಯಕೀಯ ಮಹಾವಿದ್ಯಾಲಯದ ಹೊರಗುತ್ತಿಗೆ ನೌಕರರ ಮನವಿ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ: ಗದುಗಿನ ಕೆ.ಹೆಚ್. ಪಾಟೀಲ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಹಲವು ವರ್ಷಗಳಿಂದಲೂ ಹೊರಗುತ್ತಿಗೆ ಸಿಬ್ಬಂದಿಗಳಾಗಿ ಕೆಲಸ ನಿರ್ವಹಿಸುತ್ತಿರುವವರ ವೇತನದಲ್ಲಿನ ತಾರತಮ್ಯವನ್ನು ಸರಿಪಡಿಸಬೇಕೆಂದು ಹೊರಗುತ್ತಿಗೆ ನೌಕರರು ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕರಾದ ಎಸ್.ಎನ್. ಬಳ್ಳಾರಿ ನೇತೃತ್ವದಲ್ಲಿ ಗದಗ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಮನವಿ ಸಲ್ಲಿಸಿ ಎಸ್.ಎನ್. ಬಳ್ಳಾರಿ ಮಾತನಾಡಿ, ಕೆ.ಹೆಚ್. ಪಾಟೀಲ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ನೌಕರರಿಗೆ ನೀಡುತ್ತಿರುವ ವೇತನದಲ್ಲಿನ ತಾರತಮ್ಯವನ್ನು ಸರಿಪಡಿಸಬೇಕು. ಈಗ ಅವರು ಗ್ರಾಮೀಣ ಪ್ರದೇಶ ಪ್ರವರ್ಗ-03ರಲ್ಲಿ ವೇತನವನ್ನು ತೆಗೆದುಕೊಳ್ಳುತ್ತಿದ್ದಾರೆ. ಸಿಟಿ ಪ್ರವರ್ಗ-01 ಎಂದು ಈ ನೌಕರರನ್ನು ಪರಿಗಣಿಸಿ ವೇತನ ತಾರತಮ್ಯವನ್ನು ಸರಿಪಡಿಸಬೇಕೆಂದು ಎಲ್ಲಾ ಹೊರಗುತ್ತಿಗೆ ಸಿಬ್ಬಂದಿಗಳ ಪರವಾಗಿ ಕೇಳಿಕೊಂಡರು.

ಈಗ ಕೊಡುತ್ತಿರುವ ವೇತನದಲ್ಲಿ ಕುಟುಂಬ ನಡೆಸಲು, ಮಕ್ಕಳ ವಿದ್ಯಾಭ್ಯಾಸ ಇತ್ಯಾದಿಗಳನ್ನು ನಿಭಾಯಿಸಲು ಸಾಧುವಾಗುತ್ತಿಲ್ಲ. ಈಗಿನ ದಿನಮಾನಕ್ಕೆ ತಕ್ಕಂತೆ ವೇತನವನ್ನು ಹೆಚ್ಚಳ ಮಾಡಬೇಕೆಂದು ವಿನಂತಿಸಿದರು.

ಈ ಸಂದರ್ಭದಲ್ಲಿ ಮಹಾವಿದ್ಯಾಲಯದ ಹೊರಗುತ್ತಿಗೆ ಸಿಬ್ಬಂದಿಗಳಾದ ಮಲ್ಲಪ್ಪ ಭಾವಿಮನಿ (ಸೂಪರವೈಜರ), ಕೃಷ್ಣ ಮಡಿವಾಳರ, ಮಂಜುನಾಥ್ ದೊಡ್ಮನಿ, ಭೀಮಪ್ಪ ದೊಡ್ಡಮನಿ, ಶರಣಪ್ಪ ಬೇವಿನಮರದ, ಜಗದೀಶ್ ಬೋರಮ್ಮನವರ್, ವಿನಾಯಕ್ ವಾಲ್ಮೀಕಿ, ಈರಣ್ಣ ಗೌಡರ್, ರಮೇಶ್ ನಾಗನೂರ್, ಸಂತೋಷ್ ನಾಗನೂರ್, ಬಸಪ್ಪ ಚೋಳಪ್ಪನವರ್, ಹನುಮಂತ ಹೊಸಮನಿ, ಸುಗೀರಪ್ಪ ಸುಂಕದ್, ಶಾರವ್ವ ಹೊಸಮನಿ, ಮಂಜುನಾಥ್ ಹಾದಿಮನಿ, ರವಿ ಸುಟಗೇರಿ, ಸಂತೋಷ ಯಳವತ್ತಿ, ಶಶಿಧರ್ ಭರಮಣ್ಣವರ, ರಾಜಾಸಾಬ್ ಶೇಕ್, ಹರೀಶ್ ಭಾವಿಮನಿ, ಶಿವಪ್ಪ ಗೌಡರ್, ದೀಪಕ್ ಹಾದಿಮನಿ, ಜನ್ನತಬಿ ಶೇಖ, ಲಕ್ಷ್ಮೀ ಹಂಜಿಗಿ, ರೇಣುಕಾ ಸಾಬೋಜಿ, ರೇಣುಕಾ ವಾಲ್ಮೀಕಿ, ಜಗದೀಶ ಶಲ್ಲಿಕೇರಿ ಮುಂತಾದವರು ಉಪಸ್ಥಿತರಿದ್ದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!