HomeGadag Newsತಿಮ್ಮಾಪುರಕ್ಕೆ ಭೇಟಿ ನೀಡಿದ ಕೆ.ಎಸ್. ಈಶ್ವರಪ್ಪ

ತಿಮ್ಮಾಪುರಕ್ಕೆ ಭೇಟಿ ನೀಡಿದ ಕೆ.ಎಸ್. ಈಶ್ವರಪ್ಪ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ : ಇಲ್ಲಿಯ ಸಮೀಪದ ತಿಮ್ಮಾಪೂರ ಗ್ರಾಮಕ್ಕೆ ಮಾಜಿ ಉಪಮುಖ್ಯಮಂತ್ರಿ, ಹಿಂದುಳಿದ ವರ್ಗಗಳ ನಾಯಕ ರಾಯಣ್ಣ ಬ್ರಿಗೇಡ್ ರುವಾರಿ ಕೆ.ಎಸ್. ಈಶ್ವರಪ್ಪ ಮಂಗಳವಾರ ತಿಮ್ಮಾಪೂರ ಗ್ರಾಮಕ್ಕೆ ಪ್ರಥಮ ಬಾರಿಗೆ ಭೇಟಿ ನೀಡಿದರು.

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮೂರ್ತಿಗೆ ಪೂಜೆ ಸಲ್ಲಿಸಿದರು. ಕಿರಣ್ ಡಿಜೆ ಬಾಯ್ಸ್ ಯುವಕರು ಕೆ.ಎಸ್. ಈಶ್ವರಪ್ಪನವರಿಗೆ ಕರಿ ಕಂಬಳಿ ಹಾಗೂ ಕುರಿ ಮರಿಯನ್ನು ಕೊಟ್ಟು ಸನ್ಮಾನಿಸಿದರು. ನಂತರ ಗ್ರಾಮದಲ್ಲಿ ಪಾದಯಾತ್ರೆಯ ಮೂಲಕ ತೆರಳಿ ಶ್ರೀ ಮಾರುತೇಶ್ವರನ ದರ್ಶನ ಪಡೆದು ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥನೆ ಸಲ್ಲಿಸಿದರು. ದೇವಸ್ಥಾನದ ಆವರಣದಲ್ಲಿ ಶ್ರೀ ರೇಣುಕಾ ಎಲ್ಲಮ್ಮ ದೇವಿ ಟ್ರಸ್ಟ್ ಕಮಿಟಿಯ ವತಿಯಿಂದ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಕಿರಣ ಗುಡ್ಲಾನೂರ, ಚನ್ನಮ್ಮ ಹುಳುಕಣ್ಣವರ ಮಹಾಂತೇಶ ಗಂಗರಾತ್ರಿ, ಯಲ್ಲಪ್ಪ ಎಚ್.ಬಾಬರಿ, ಬಸವರಾಜ ಗಾಜಿ, ಬಾಳಪ್ಪ ಗಂಗರಾತ್ರಿ, ಸಂತೋಷ ಯಲಬುರ್ಗಿ, ಶಿವನಪ್ಪ ಯತ್ನಟ್ಟಿ, ಸಂತೋಷ ಬಾಚಲ್ಲಾಪುರ, ಮಾರುತಿ ಜೋಗಿನ, ಮಲ್ಲಪ್ಪ ಯತ್ನಟ್ಟಿ, ಮಲ್ಲಪ್ಪ ಅಂಗಡಿ, ಶಿವಕುಮಾರ ಯತ್ನಟ್ಟಿ, ನೀಲ್ಲಪ್ಪ ಗಾಜಿ, ಬಸವರಾಜ ಯಲಬುರ್ಗಿ, ಶೇಖಪ್ಪ ಘಂಟಿ, ರಾಮಣ್ಣ ಖಂಡ್ರೆ, ದೇವಿಂದ್ರಪ್ಪ ಉಂಡಿ ಹಾಗೂ ನೂರಾರು ಅಭಿಮಾನಿಗಳು ಪಾಲ್ಗೊಂಡಿದ್ದರು.


Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!