ಚಂಡೀಗಢ:- ಕಾಂಗ್ರೆಸ್ ಕಾರ್ಯಕರ್ತೆ ಹಿಮಾನಿ ಶವ ಸೂಟ್‌ಕೇಸ್‌ನಲ್ಲಿ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಶಂಕಿತನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
Advertisement
ಬಂಧಿತನು ಬಹದ್ದೂರ್‌ಗಢ ನಿವಾಸಿಯಾಗಿದ್ದು, ಈತ ಹಿಮಾನಿಯೊಂದಿಗೆ ಸಂಪರ್ಕ ಹೊಂದಿದ್ದ ಎಂದು ವರದಿಗಳು ತಿಳಿಸಿವೆ. ಇನ್ನೂ ಶಂಕಿತ ಆರೋಪಿಯಿಂದ ಹಿಮಾನಿ ನರ್ವಾಲ್‌ನ ಮೊಬೈಲ್ ಹಾಗೂ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ರೋಹ್ಟಕ್ ಜಿಲ್ಲೆಯ ಬಸ್ ನಿಲ್ದಾಣದ ಬಳಿಯಿದ್ದ ಸೂಟ್‌ಕೇಸ್‌ನಲ್ಲಿ ಹಿಮಾನಿ ಶವ ಪತ್ತೆಯಾದ ಬಳಿಕ ಪ್ರಕರಣ ದಾಖಲಿಸಿಕೊಂಡಿದ್ದ ಹರಿಯಾಣ ಪೊಲೀಸ್ ಇಲಾಖೆ ತನಿಖೆಗಾಗಿ ವಿಶೇಷ ತಂಡವನ್ನ ರಚನೆ ಮಾಡಿತ್ತು. ಪ್ರಕರಣ ಬೆಳಕಿಗೆ ಬಂದ ಒಂದು ದಿನದ ನಂತರ ಓರ್ವನನ್ನ ಬಂಧಿಸಲಾಗಿದೆ.