ಗುರು ವಚನೋಪದೇಶದಿಂದ ಮುಕ್ತಿ : ಪೂಜ್ಯಶ್ರೀ ಕೃಷ್ಣೆಗೌಡ ಕೋಲೂರು

0
Kaivalya System Shivayoga Shivanubhava
Spread the love

ವಿಜಯಸಾಕ್ಷಿ ಸುದ್ದಿ, ಗದಗ : ಪುಣ್ಯ ಕಾರ್ಯಗಳಿಂದ ಆತ್ಮ ಶುದ್ಧಿಯಾಗುತ್ತದೆ. ವಚನ ಬಹಿರಂಗ ಸಾಧನವಾದರೆ, ಉಪದೇಶ ಅಂತರಂಗದ ಸಾಧನವಾಗಿದೆ. ಶ್ರೀಗುರುಗಳ ವಚನೋಪದೇಶವನ್ನು ಆಲಿಸಿದಾಗ ಮುಕ್ತಿ ದೊರೆಯುತ್ತದೆ ಎಂದು ರನ್ನಬೆಳಗಲಿಯ ಸಿದ್ದಾರೂಡಮಠದ ಪೂಜ್ಯಶ್ರೀ ಕೃಷ್ಣೆಗೌಡ ಕೋಲೂರು ಹೇಳಿದರು.

Advertisement

ನಗರದ ವೀರೇಶ್ವರ ಪುಣ್ಯಾಶ್ರಮದಲ್ಲಿ ಪಂ. ಪಂಚಾಕ್ಷರ ಗವಾಯಿಗಳವರ 8 ನೇ ಸ್ವರ ಸಮಾರಾಧನೆ ಹಾಗೂ ಡಾ. ಪಂ.ಪುಟ್ಟರಾಜ ಕವಿ ಗವಾಯಿಗಳವರ 14ನೇ ಪುಣ್ಯಸ್ಮರಣೋತ್ಸವದ ಅಂಗವಾಗಿ ಜರುಗಿದ ಕೈವಲ್ಯ ಪದ್ಧತಿ ಶಿವಯೋಗ ಶಿವಾನುಭವದಲ್ಲಿ ಮಾತನಾಡಿ, ಅಂತರಂಗ ಬಹಿರಂಗದಿಂದ ಆತ್ಮಶುದ್ಧಿಯಾಗಬೇಕಾದರೆ ಗುರು ಉಪದೇಶ ಕೇಳಬೇಕು ಎಂದು ಹೇಳಿದರು.

ಕರಿಕಟ್ಟಿಯ ಕುಮಾರಶಾಸ್ತಿçಗಳು ಹಿರೇಮಠ ಅವರು ಮಾತನಾಡಿ, ಯೋಗ ಮಾಡಿದರೆ ಶರೀರ ಗಟ್ಟಿಯಾಗುತ್ತದೆ, ಶಿವಯೋಗ ಮಾಡಿದರೆ ಆತ್ಮ ಗಟ್ಟಿಯಾಗುತ್ತದೆ. ಜೈಲಿನಿಂದ ಬಿಡುಗಡೆಯಾಗುವದು ಮುಕ್ತಿಯಲ್ಲ, ಸಾಲದಿಂದ ಮುಕ್ತನಾಗುವದು ಮುಕ್ತಿಯಲ್ಲ, ರೋಗದಿಂದ ಮುಕ್ತನಾಗುವದು ಮುಕ್ತಿಯಲ್ಲ.

ಗುರುವಿನ ವಚನೋಪದೇಶದಿಂದ ಜೀವನಮುಕ್ತನಾಗಬೇಕು ಅಂದಾಗ ಮುಕ್ತಿ ಸಿಗುತ್ತದೆ ಎಂದು ಹೇಳಿದರು.
ಬ್ರಹನ್ಮಠ-ರಾಜೂರ-ಅಡ್ನೂರ- ಗದಗ ದಾಸೋಹ ಶ್ರೀಮಠದ ಪೂಜ್ಯಶ್ರೀ ಅಭಿನವ ಪಂಚಾಕ್ಷರ ಶಿವಾಚಾರ್ಯ ಮಹಾಸ್ವಾಮಿಗಳು ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿ, ಶಿವನ ಸಾಯುಜ್ಯ ಪಡೆಯಲು ಅಂತರಂಗ ಶುದ್ಧಿಯಾಗಬೇಕು. ಗಡಗಿಯೊಳಗಿರುವ ಹೆಂಡದ ವಾಸನೆ ಹೋಗಬೇಕಾದರೆ ಗಡಗಿ ಒಳಗೆ ತೊಳೆಯಬೇಕು.

ಹೊರಗೆ ತೊಳೆದರೆ ಹೆಂಡದ ವಾಸನೆ ಹೋಗುವದಿಲ್ಲ. ಅದೇ ರೀತಿ ದೇಹ ಎನ್ನುವ ಗಡಗಿಯನ್ನು ಅಂತರಂಗದ ಒಳಗೆ ತೊಳೆದಾಗ ಮನ, ದೇಹ ಶುದ್ಧಿಯಾಗುತ್ತದೆ. ಮನುಷ್ಯ ಜೀವನ ಮುಕ್ತನಾಗಬೇಕಾದರೆ ಶಿವಯೋಗ ಸಾಧನ ಬೇಕೆಂದು ಹೇಳಿದರು.

ರನ್ನಬೆಳಗಲಿಯ ಮಹಾಲಿಂಗ ಶಾಸ್ತ್ರೀಗಳು ಮಾತನಾಡಿದರು. ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿ ಪೂಜ್ಯಶ್ರೀ ಕಲ್ಲಯ್ಯಜ್ಜನವರು ಸಮ್ಮುಖ ವಹಿಸಿದ್ದರು. ರಘುನಂದ ಶಾಸ್ತ್ರೀಗಳು ಅರಳಗುಂಡಿಗಿ ಸ್ವಾಗತಿಸಿದರು. ಕದಮನಹಳ್ಳಿಯ ಪಂಚಾಕ್ಷರಿ ಶಾಸ್ತ್ರೀಗಳು ಹಾಗೂ ಸೋಮನಾಳದ ಸಿದ್ರಾಮಯ್ಯಶಾಸ್ತ್ರೀಗಳು ನಿರೂಪಿಸಿದರು.


Spread the love

LEAVE A REPLY

Please enter your comment!
Please enter your name here