ವಿಜಯಸಾಕ್ಷಿ ಸುದ್ದಿ, ಮುಳಗುಂದ: ಕಾಲಭೈರವನ ಆರಾಧನೆಯಿಂದ ನಕಾರಾತ್ಮಕ ಶಕ್ತಿ ನಾಶವಾಗುತ್ತದೆ ಎಂದು ಬಸವರಾಜ ಗೌರಿಮನಿ ಹೇಳಿದರು.
Advertisement
ಅವರು ಪಟ್ಟಣದ ಕಾಲಭೈರವ ದೇವಸ್ಥಾನದಲ್ಲಿ ಕಾರ್ತಿಕ ಮಾಸದ ನಿಮಿತ್ತ ಕಾಲಭೈರವನಿಗೆ ಕಾರ್ತಿಕೋತ್ಸವ ಜರುಗಿಸಿ ಮಾತನಾಡಿ, ಕಾಲಭೈರವ ಸಾಕ್ಷಾತ್ ಶಿವನ ಪ್ರತಿರೂಪವಾಗಿರುವುದರಿಂದ ದುಷ್ಟ ಶಕ್ತಿ ನಿರ್ಮೂಲನೆ ಮಾಡಲು ಅವತಾರ ಎತ್ತಿಬಂದವನು. ಕಾಲಭೈರವನ ಆರಾಧನೆಯಿಂದ ನಕಾರಾತ್ಮಕ ಶಕ್ತಿ ಅಡಗಿ ಸಕಾರಾತ್ಮಕ ಶಕ್ತಿ ಹೆಚ್ಚಿಸುತ್ತದೆ ಎಂದರು.
ಬಸವರಾಜ ಗೌರಿಮನಿ, ಶಶಿಕಲಾ ಗೌರಿಮನಿ, ಚಿದಾನಂದ ಗೌರಿಮನಿ, ವನಜಾಕ್ಷಿ ಕೋರ್ಪಡೆ, ಕಸ್ತೂರಿ ಬಗಾಡೆ, ಸಚಿನ್ ಗೌರಿಮನಿ, ಧರ್ಷಣ ಗೌರಿಮನಿ, ಸಂಕೇತ ಹಾಸಲ್ಕರ್, ರೇಣುಕಾ ಗೌರಿಮನಿ ಇದ್ದರು.


