ಕಲಬುರ್ಗಿ:- ಆಳಂದ ಕ್ಷೇತ್ರದಲ್ಲಿ ವೋಟ್ ಚೋರಿ ಪ್ರಕರಣಕ್ಕೆ ಸಂಬಂಧಿಸಿದಂತೆ SIT ಯಿಂದ ಮೊದಲ ಬಂಧನವಾಗಿದೆ.
Advertisement
ಕಾಲ್ ಸೆಂಟರ್‌ನಲ್ಲಿ ಕೆಲಸ ಮಾಡ್ತಿದ್ದ ನಬೀ ಎಂಬಾತನ್ನ ಎಸ್ಐಟಿ ಬಂಧಿಸಿದೆ. ಕಾಲ್‌ಸೆಂಟರ್ ಅಲ್ಲಿ ಕೆಲಸ ಮಾಡುತ್ತಾ ಇದ್ದ ನಭೀ, ಮತದಾರರ ಹೆಸರು ಡಿಲೀಟ್ ಮಾಡೋದಕ್ಕೆ ಓಟಿಪಿ ನೀಡ್ತಿದ್ದ. ಈ ಆರೋಪಿ ಮುಖಾಂತರವೇ ಓಟಿಪಿ ಪಡೆದುಕೊಂಡು ಡಿಲೀಟ್ ಪ್ರಕ್ರಿಯೆ ಮಾಡಲಾಗುತಿತ್ತು. ಹಣ ಪಡೆದು ಮೊಬೈಲ್ ನಂಬರ್ ನೀಡಿ ಒಟಿಪಿ ಕೂಡ ನೀಡುತ್ತಾ ಇದ್ದ ಸಂಬಂಧ ನಬೀಯನ್ನ ಬಂಧಿಸಿ ವಿಚಾರಣೆ ನಡೆಸಲಾಗ್ತಿದೆ.
ಈಗಾಗಲೇ ಪ್ರಕರಣ ಸಂಬಂಧ ಹಲವರಿಗೆ ಬಿಸಿ ಮುಟ್ಟಿಸಿದ್ದು, ತನಿಖೆಯನ್ನ ಚುರುಕುಗೊಳಿಸಿದ್ದಾರೆ.


