ದೇವಸ್ಥಾನದ ಕಳಸಾರೋಹಣ ಇಂದು

0
aditya
Spread the love

ವಿಜಯಸಾಕ್ಷಿ ಸುದ್ದಿ, ಗದಗ : ಇಲ್ಲಿನ ಆದಿತ್ಯ ನಗರದಲ್ಲಿ ಶ್ರೀ ಮಾರುತಿ ವಿವಿಧೋದ್ದೇಶಗಳ ಸೇವಾ ಸಂಘದ ವತಿಯಿಂದ ಶ್ರೀ ಮಾರುತಿ, ಶ್ರೀ ಗಣೇಶ, ಶ್ರೀ ಈಶ್ವರ ನಂದಿ, ಶ್ರೀ ಅನ್ನಪೂರ್ಣೇಶ್ವರಿ, ನವಗ್ರಹ ದೇವಸ್ಥಾನಗಳ ಕಳಸಾರೋಹಣ ಹಾಗೂ ಹನುಮ ಜಯಂತಿ ಕಾರ್ಯಕ್ರಮದ ಅಂಗವಾಗಿ ಸೋಮವಾರ ಸಾಯಂಕಾಲ ಮಹಿಳೆಯರ ಪೂರ್ಣ ಕುಂಭದೊಂದಿಗೆ ಆರತಿ, ಭಜನೆ, ಡೊಳ್ಳು, ವಾದ್ಯ ಮೇಳಗಳೊಂದಿಗೆ ಪಂಚ ಕಳಸಗಳ ಭವ್ಯ ಮೆರವಣಿಗೆ ಜರುಗಿತು.

Advertisement

ಏ. 23ರ ಬೆಳಿಗ್ಗೆ 4.30ಕ್ಕೆ ಮಹಾಗಣಪತಿ, ನವಗ್ರಹ ಹೋಮ, ರುದ್ರಾಭಿಷೇಕ, 7 ಗಂಟೆಗೆ ದೇವಸ್ಥಾನಗಳ ಕಳಸಾರೋಹಣ, 8 ಗಂಟೆಗೆ ಬಾಲ ಹನುಮನ ತೊಟ್ಟಿಲೋತ್ಸವ ಜರುಗಲಿದೆ. 9 ಗಂಟೆಗೆ ಧರ್ಮ ಚಿಂತನ ಸಭೆ ಜರುಗಲಿದ್ದು, ಸಭೆಯ ದಿವ್ಯ ಸಾನ್ನಿಧ್ಯವನ್ನು ಮಲ್ಲಸಮುದ್ರದ ಓಂಕಾರೇಶ್ವರ ಹಿರೇಮಠದ ಶ್ರೀ ಫಕೀರೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ವಹಿಸುವರು. ಅಡ್ನೂರಿನ ಶ್ರೀ ಅಭಿನವ ಪಂಚಾಕ್ಷರ ಶಿವಾಚಾರ್ಯ ಮಹಾಸ್ವಾಮಿಗಳು, ನೀಲಗುಂದ ಗುದ್ನೇಶ್ವರ ಮಠದ ಶ್ರೀ ಪ್ರಭುಲಿಂಗದೇವರು, ನಂದಿವೇರಿಮಠದ ಶ್ರೀ ಶಿವಕುಮಾರ ಮಹಾಸ್ವಾಮಿಗಳು, ವೀರೇಶ್ವರ ಪುಣ್ಯಾಶ್ರಮದ ಶ್ರೀ ಕಲ್ಲಯ್ಯಜ್ಜನವರು ಸಾನ್ನಿಧ್ಯ ವಹಿಸಲಿದ್ದಾರೆ.

ಮಧ್ಯಾಹ್ನ 12.30ಕ್ಕೆ ಮಹಾ ಅನ್ನಸಂತರ್ಪಣೆ ಜರುಗಲಿದೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.


Spread the love

LEAVE A REPLY

Please enter your comment!
Please enter your name here