`ಕಲಿಕೋತ್ಸವ’ ಕಲಿಕೆಯ ಸಂಭ್ರಮ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಬಾಲ ವಿನಾಯಕ ವಿದ್ಯಾನಿಕೇತನದ ಶಾಖೆಯಾದ ಅರ್ಲಿ ಲರ್ನಿಂಗ್ ಸೆಂಟರ್‌ನಲ್ಲಿ `ಕಲಿಕೋತ್ಸವ-ಕಲಿಕೆಯ ಸಂಭ್ರಮ’ವನ್ನು ಆಚರಿಸಲಾಯಿತು. ಮುಖ್ಯ ಅತಿಥಿಗಳಾದ ಡಾ. ಅಕ್ಷತಾ ಕವಳಿಕಾಯಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

Advertisement

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕಾರ್ಯಕ್ರಮವು ವಿದ್ಯಾರ್ಥಿಗಳಿಗೆ ತಮ್ಮ ಶೈಕ್ಷಣಿಕ ಪ್ರತಿಭೆಯನ್ನು ಪ್ರದರ್ಶಿಸಲು ಮತ್ತು ಆತ್ಮವಿಶ್ವಾಸವನ್ನು ಮೂಡಿಸಲು ವೇದಿಕೆಯನ್ನೊದಗಿಸಿದೆ. ವಿದ್ಯಾರ್ಥಿಗಳ ಕ್ರಿಯಾಶೀಲತೆ ಮತ್ತು ಶೈಕ್ಷಣಿಕ ಸಾಮರ್ಥ್ಯವನ್ನು ಎತ್ತಿ ಹಿಡಿದು ಕಲಿಕೋತ್ಸವವು ವಿದ್ಯಾರ್ಥಿಗಳಿಗೆ ಮತ್ತು ಪಾಲಕರಿಗೆ ಪ್ರೋತ್ಸಾಹದಾಯಕ ವಾತಾವರಣಕ್ಕೆ ಅವಕಾಶ ಮಾಡಿಕೊಟ್ಟಿದೆ ಎಂದರು.

ಎಲ್‌ಕೆಜಿ ಮತ್ತು ಯುಕೆಜಿ ತರಗತಿಗಳ ಎಲ್ಲಾ ವಿದ್ಯಾರ್ಥಿಗಳು ಆಂಗ್ಲ ಭಾಷೆ, ಕನ್ನಡ, ಗಣಿತ, ಪರಿಸರ ಅಧ್ಯಯನ, ಆಂಗ್ಲ ಮತ್ತು ಕನ್ನಡ ಭಾಷೆಯ ಕುರಿತು ತಂದ ನವೀನ ಯೋಜನೆಗಳು, ಮಾದರಿಗಳು ಮತ್ತು ಚಾರ್ಟ್ಗಳನ್ನು ಪ್ರದರ್ಶಿಸುತ್ತಾ ಉತ್ಸಾಹದಿಂದ ಭಾಗವಹಿಸಿದರು.

ಕಾರ್ಯಕ್ರಮದಲ್ಲಿ ಇ.ಎಲ್.ಸಿಯ ಅಧ್ಯಕ್ಷೆ ಮಲ್ಲಿಕಾ ಆರ್., ಶಾಲಾ ನಿರ್ದೇಶಕ ವಿನಾಯಕ್ ಆರ್., ಪ್ರಾಂಶುಪಾಲರಾದ ವಿ.ಎಂ. ಅಡ್ನೂರು, ಉಪ ಪ್ರಾಂಶುಪಾಲರಾದ ಪಿ.ಜಿ. ಬ್ಯಾಳಿ, ಶಿಕ್ಷಕರು, ಪಾಲಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


Spread the love

LEAVE A REPLY

Please enter your comment!
Please enter your name here