ಬೆಂಗಳೂರು: ಕನ್ನಡ ಭಾಷೆಯ ಹುಟ್ಟಿನ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿರುವ ತಮಿಳು ಸಿನಿಮಾದ ಹಿರಿಯ ನಟ ಕಮಲ್ ಹಾಸನ್ ವಿರುದ್ಧ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇನ್ನೂ ವಿಚಾರವಾಗಿ ಡಿಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯೇ ನೀಡಿದ್ದಾರೆ.
Advertisement
ನಗರದಲ್ಲಿ ಮಾತನಾಡಿದ ಅವರು, ನನಗೆ ಇತಿಹಾಸ ಗೊತ್ತಿಲ್ಲ. ನಾನು ವಾಸ್ತವಾಂಶ ಏನಿದೆ ಅಂತ ತಿಳಿದುಕೊಂಡು ಆಮೇಲೆ ಪ್ರತಿಕ್ರಿಯೆ ಕೊಡ್ತೇನೆ ಎಂದಿದ್ದಾರೆ. ಆದ್ರೆ ನಾವು ಮತ್ತು ತಮಿಳರು ನೆರೆಹೊರೆಯವರು. ನಾವು ಸೌಹಾರ್ದತೆಯಿಂದ ಬಾಳಬೇಕು.
ನಾವು ಅವರಿಗೆ ಕಾವೇರಿ ನೀರು ಕೊಡ್ತೇವೆ ಎಂದು ಹೇಳಿದ್ದಾರೆ. ತಮಿಳುನಾಡಿಂದ ತುಂಬಾ ಜನ ಕರ್ನಾಟಕದ ವಿವಿಧ ಭಾಗಗಳಲ್ಲಿ ನೆಲೆಸಿದ್ದಾರೆ. ಅಲ್ಲಿಂದ ಇಲ್ಲಿಗೆ ಬಂದು ಕೆಲಸ ಮಾಡ್ತಿದ್ದಾರೆ. ನಾವೆಲ್ಲರೂ ಶಾಂತಿ ಕಾಪಾಡಿಕೊಳ್ಳುವುದು ಮುಖ್ಯ. ಯಾವುದೂ ಕೂಡ ಶಾಶ್ವತ ಅಲ್ಲ, ಎಲ್ಲವನ್ನೂ ಬಗೆಹರಿಸಲಾಗುತ್ತದೆ ಎಂದು ಹೇಳಿದರು.