ಕಮಲ ಕೋಟೆ “ಕೈ” ವಶಕ್ಕೆ: ಮಾಜಿ ಸಿಎಂಗೆ ಮುಖಭಂಗ – ಯಾಸಿರ್ ಪಠಾಣ್ʼಗೆ ಜಯಭೇರಿ

0
Spread the love

ಹಾವೇರಿ: ಶಿಗ್ಗಾಂವಿ-ಸವಣೂರು ಕ್ಷೇತ್ರಕ್ಕೆ ನ.13 ರಂದು ಉಪಚುನಾವಣೆ ನಡೆದಿದ್ದು, ಇಂದು ಫಲಿತಾಂಶ ಹೊರಬಿದ್ದಿದೆ. ಈ ಚುನಾವಣೆಯಲ್ಲಿ ಯಾರು ಗೆಲುವು ಸಾಧಿಸುತ್ತಾರೆ ಎಂಬುದು ತೀವ್ರ ಕುತೂಹಲಕ್ಕೆ ಕಾರಣವಾಗಿತ್ತು. ಇದೀಗ ತೆರೆಬಿದ್ದಿದ್ದು, ಶಿಗ್ಗಾಂವಿಯಲ್ಲಿ ಕಾಂಗ್ರೆಸ್ನ ಯಾಸಿರ್ ಅಹಮದ್ ಖಾನ್ ಪಠಾಣ್ ಗೆಲುವು ಸಾಧಿಸಿದ್ದಾರೆ.

Advertisement

ಮಾಜಿ ಮುಖ್ಯಮಂತ್ರಿ, ಹಾಲಿ ಸಂಸದ ಬಸವರಾಜ ಬೊಮ್ಮಾಯಿ ಮಗ ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ ಅವರಿಗೆ ಸೋಲಾಗಿದೆ. ಈ ಹಿಂದೆ ಕಾಂಗ್ರೆಸ್‌ನ ಮತ್ತೋರ್ವ ಆಕಾಂಕ್ಷಿಯಾಗಿದ್ದ ಅಜ್ಜಂಪೀರ್ ಖಾದ್ರಿ ಅವರಿಗೆ ಟಿಕೆಟ್‌ ನೀಡದಿದ್ದಕ್ಕೆ ಬೇಸರಗೊಂಡಿದ್ದರು. ಆದರೆ ಅದನ್ನು ಶಮನಗೊಳಿಸಿ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದು ಬೀಗಿದೆ.

ಒಟ್ಟು 18 ಸುತ್ತುಗಳಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಯಾಸಿರ್‌ ಅಹ್ಮದ್‌ ಪಠಾಣ್‌ 10,0756 ಮತ ಪಡೆದಿದ್ದು, ಬಿಜೆಪಿಯ ಭರತ್‌ ಬೊಮ್ಮಾಯಿ 87,308 ಪಡೆದಿದ್ಧಾರೆ. ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರ ಪುತ್ರ ಭರತ್‌ ಬೊಮ್ಮಾಯಿ ವಿರುದ್ಧ 13,448 ಮತಗಳ ಅಂತರದಿಂದ ಗೆಲುವಿನ ನಗೆ ಬೀರಿದ್ದಾರೆ.‌

ಅಜ್ಜಂಪೀರ್ ಖಾದ್ರಿ ಬಂಡಾಯ ಶಮನ ಆಗಿದ್ದು ಪಠಾಣ್ ಗೆ ಪ್ಲಸ್ ಆಯಿತು. ಇಷ್ಟೇ ಅಲ್ಲ ಸಚಿವ ಸತೀಶ್ ಜಾರಕಿಹೊಳಿ ನೇತೃತ್ವದಲ್ಲಿ ರಣತಂತ್ರ ಹೆಣೆದಿದ್ದು, ವಾಲ್ಮೀಕಿ, ದಲಿತ ಮತದಾರರು ‘ಕೈ’ ಹಿಡಿದ ಲೆಕ್ಕಾಚಾರ ನಾಯಕರಿಗೆ ಇದೆ. ಸಚಿವ ಜಮೀರ್ ಮುಸ್ಲಿಂ ಮತದಾರರ ಓಲೈಕೆ ಮಾಡಿದ್ದು, ಪಠಾಣ್ ಪರ ಅಜ್ಜಂಪೀರ್ ಖಾದ್ರಿ ಪ್ರಚಾರ ಮಾಡಿದ್ದು, ಸಿಎಂ ಮುಡಾ ಸಂಕಷ್ಟದ ಅನುಕಂಪ ವರ್ಕೌಟ್ ಆಗಿದ್ದಲ್ಲದೇ, ಕುರುಬ ಸಮಾಜದ ಮತ ಕಾಂಗ್ರೆಸ್‌ಗೆ ವಾಲಿದ ನಂಬಿಕೆ ಆ ಪಕ್ಷದ ನಾಯಕರಲ್ಲಿದೆ.

ಶಿಗ್ಗಾಂವಿಯಲ್ಲಿ ಬಸವರಾಜ ಬೊಮ್ಮಾಯಿ ಲೋಕಸಭೆ ಚುನಾವಣೆಯಲ್ಲಿ ಗೆದ್ದು ಬೀಗಿದ್ದರು. ಈಗ ಅವರ ರಾಜೀನಾಮೆಯಿಂದ ತೆರವಾದ ಕ್ಷೇತ್ರದಲ್ಲಿ ಅವರ ಪುತ್ರ ಭರತ್ ಅಭ್ಯರ್ಥಿಯಾಗಿದ್ದರಿಂದ ಹೆಚ್ಚು ಗಮನ ಸೆಳೆದಿತ್ತು. ಆದ್ರೆ ಶಿಗ್ಗಾಂವಿ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಯಾಸೀರ್ ಪಠಾಣ್ ಗೆ 13,448 ಮತಗಳ ಅಂತರದಲ್ಲಿ ಗೆಲುವು ದೊರೆತಿದೆ. ಆದ್ರಿಂದ ಶಿಗ್ಗಾಂವಿ ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿಗೆ ಮುಖಭಂಗವಾಗಿದೆ.


Spread the love

LEAVE A REPLY

Please enter your comment!
Please enter your name here