ಕನ್ನಡದ ಬಗ್ಗೆ ನಟ ಕಮಲ್ ಹಾಸನ್ ನೀಡಿರುವ ಹೇಳಿಕೆ ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ. ಕಮಲ್ ಹೇಳಿಕೆ ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದ್ದು ಕಮಲ್ ಹಾಸನ್ ಕ್ಷಮೆ ಕೇಳುವಂತೆ ಹಲವು ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. ಆದ್ರೆ ಇದ್ಯಾವುದಕ್ಕೂ ಕ್ಯಾರೆ ಎನ್ನದ ಕಮಲ್ ಸಿನಿಮಾ ಬಿಡುಗಡೆಗೆ ರಕ್ಷಣೆ ಕೋರಿ ಕೋರ್ಟ್ ಮೆಟ್ಟಿಲೇರಿದ್ದರು. ಕೋರ್ಟ್ ನಲ್ಲೂ ಕಮಲ್ ಕ್ಷಮೆ ಕೇಳುವಂತೆ ನ್ಯಾಯಾಧೀಶರು ತಿಳಿಸಿದ್ದರು. ಆದ್ರೆ ಇದಕ್ಕೆ ಡೋಂಟ್ ಕೇರ್ ಎನ್ನದ ಕಮಲ್ ತಾನು ಹೇಳಿದ್ದೇ ಸರಿ ಎನ್ನುತ್ತಿದ್ದು ಈ ಮಧ್ಯೆ ತಮಿಳುನಾಡು ಹಾಗೂ ತಮಿಳು ಜನತೆಗೆ ಧನ್ಯವಾದ ಹೇಳಿದ್ದಾರೆ.
ಥಗ್‌ಲೈಫ್ ರಿಲೀಸ್ ಗೆ ಸಧ್ಯದ ಮಟ್ಟಿಗೆ ಕರ್ನಾಟಕದಲ್ಲಿ ಸದ್ಯದ ಮಟ್ಟಿಗೆ ನಿಷೇಧ ಹೇರಲಾಗಿದೆ. ಇದೀಗ ವಿವಾದದ ನಡುವೆಯೇ ಕಮಲ್. ‘ನನ್ನ ಬೆನ್ನಿಗೆ ನಿಂತ ತಮಿಳುನಾಡಿಗೆ, ತಮಿಳಿಗರಿಗೆ ಧನ್ಯವಾದ’.‘ವಿವಾದದ ಸಂದರ್ಭದಲ್ಲಿ ಬೆನ್ನಿಗೆ ನಿಂತವರಿಗೆ ಚಿರಋಣಿ’. ಇದು ಥಗ್ ಲೈಫ್ ಸಮಾರಂಭ ಅಷ್ಟೇ. ಈಗ ಊಟ ಮಾಡೋಣ.ಮುಂದೆ ಮಾತಾಡೋದು ತುಂಬಾ ಇದೆ ಎಂದು ಉದ್ದಟತನ ಮೆರೆದಿದ್ದಾರೆ.
ಅದು ಥಗ್ ಲೈಫ್‌ಗೆ ಸಂಬಂಧಿಸಿದ್ದಲ್ಲ. ವಿವಾದದ ಬಗ್ಗೆ ನಂತರ ಮಾತಾಡೋಣ. ಖಂಡಿತಾ ಮಾತಾಡೋಣ..ಸೂಕ್ತ ಸಮಯದಲ್ಲಿ ಮಾತನಾಡೋಣ ಎಂದು ಹೇಳಿಕೆ ನೀಡಿದ್ದಾರೆ.
“ನನ್ನನ್ನು ಬೆಂಬಲಿಸಿದ್ದಕ್ಕಾಗಿ ಮತ್ತು ಬೆಂಬಲವಾಗಿ ನಿಂತಿದ್ದಕ್ಕಾಗಿ ತಮಿಳುನಾಡಿಗೆ ನಾನು ಧನ್ಯವಾದ ಹೇಳಬೇಕು. ‘ಉಯಿರೆ’, ‘ಉರವೆ’, ‘ತಮಿಝೆ’ ಎಂಬ ಪದಗುಚ್ಛದ ಅರ್ಥವನ್ನು ನಾನು ಸಂಪೂರ್ಣವಾಗಿ ಅರ್ಥಮಾಡಿಕೊಂಡಿದ್ದೇನೆ ಮತ್ತು ನಾನು ಅದರ ಪರವಾಗಿ ನಿಲ್ಲುತ್ತೇನೆ”. ಆ ಮೂಲಕ ತಮಿಳು ಭಾಷೆ ಮತ್ತು ಸಂಸ್ಕೃತಿಯೇ ತಮಗೆ ಮೊದಲು ಎಂದಿದ್ದಾರೆ. ಕರ್ನಾಟಕದಲ್ಲಿ ‘ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ’ ರೀತಿ, ‘ಉಯಿರೆ, ಉರವೆ, ತಮಿಳೆ’ ಅನ್ನು ತಮಿಳುತನವನ್ನು ಉತ್ತೇಜಿಸುವ ಹೇಳಿಕೆಯಾಗಿ ತಮಿಳುನಾಡಿನಲ್ಲಿ ಬಳಸಲಾಗುತ್ತದೆ.