ವಿಜಯಸಾಕ್ಷಿ ಸುದ್ದಿ, ಗದಗ: ಗ್ರಾಮೀಣ ಪರಿಸರದ ಸಮಗ್ರ ಚಿತ್ರಣವನ್ನು ಚಂದ್ರಶೇಖರ ಕಂಬಾರರ ಕಾವ್ಯ ಮತ್ತು ನಾಟಕಗಳಲ್ಲಿ ಕಾಣಬಹುದಾಗಿದೆ. ಕನ್ನಡ ಜಾನಪದ ಪರಂಪರೆಯನ್ನು ಸಮರ್ಥವಾಗಿ ಬಳಸಿಕೊಂಡು ಪ್ರಸ್ತುತ ದಿನಮಾನದ ಎಲ್ಲ ಸಮಸ್ಯೆಗಳಿಗೆ ಪರಿಹಾರ ಸೂಚಿಸುವ ರೀತಿಯಲ್ಲಿ ತಮ್ಮ ಕೃತಿಗಳನ್ನು ರಚಿಸಿದ್ದಾರೆ ಎಂದು ಎಚ್.ಎನ್. ಕಾಳೆ ತಿಳಿಸಿದರು.
ಅವರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಗದುಗಿನ ತೋಂಟದ ಸಿದ್ಧಲಿಂಗಶ್ರೀಗಳ ಕನ್ನಡ ಭವನ, ಕ.ಸಾ.ಪ ಕಾರ್ಯಾಲಯದಲ್ಲಿ ದಿ. ಗಿರೋಸಾ ಬದಿ ಹಾಗೂ ದಿ. ಎಲ್ಲೂಬಾಯಿ ಬದಿ ಇವರ ಸ್ಮರಣಾರ್ಥ ಜರುಗಿದ ದತ್ತಿ ಉಪನ್ಯಾಸದಲ್ಲಿ ಚಂದ್ರಶೇಖರ ಕಂಬಾರ ಅವರ ಕೊಡುಗೆ ಕುರಿತು ಮಾತನಾಡಿದರು.
ಬೇಂದ್ರೆ ಅವರ ನಂತರ ಉತ್ತರ ಕರ್ನಾಟಕದ ಭಾಷೆಯನ್ನು ಸಮರ್ಥವಾಗಿ ತಮ್ಮ ಕೃತಿಗಳಲ್ಲಿ ದುಡಿಸಿಕೊಂಡುರು ಕಂಬಾರರು. ಕನ್ನಡ ನಾಟಕಕ್ಕೆ ತಮ್ಮ ಕೃತಿಗಳ ಮೂಲಕ ಹೊಸ ಪ್ರವಾಹವನ್ನು ತಂದರು. ಕಾವ್ಯ, ಕಾದಂಬರಿ ಕ್ಷೇತ್ರದಲ್ಲೂ ಅಮೋಘ ಕೊಡುಗೆ ನೀಡುವ ಮೂಲಕ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ ಎಂದು ತಿಳಿಸಿದರು.
ದತ್ತಿ ದಾನಿಗಳು ಹಾಗೂ ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ರತ್ನಾ ಗಿರೋಸಾ ಬದಿ ಮಾತನಾಡಿ, ವ್ಯಕ್ತಿಯ ಜೀವನದ ಉನ್ನತಿಗೆ ತಂದೆ-ತಾಯಿಗಳ ಕೊಡುಗೆ ಅಪಾರವಾದುದು. ಅವರ ತ್ಯಾಗ, ಪ್ರೀತಿಯ ಫಲವಾಗಿ ಉತ್ತಮ ಬದುಕು ನಿರ್ವಹಿಸಲು ಸಾಧ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ ಗಿರೋಸಾ ಹಾಗೂ ಯಲ್ಲಮ್ಮ ಬದಿ ಅವರು ಜೀವನ ಮಾದರಿಯಾಗಿದೆ ಎಂದು ತಿಳಿಸಿದರು.
ಶಿರಹಟ್ಟಿ ತಾಲೂಕಾ ಕಸಾಪ ಅಧ್ಯಕ್ಷ ನವೀನ ಅಳವಂಡಿ, ಎಲ್ಲೋಬಾಯಿ ಬದಿ ವೇದಿಕೆ ಮೇಲೆ ಉಪಸ್ಥಿತರಿದ್ದರು. ಕಾರ್ಯದರ್ಶಿ ದತ್ತಪ್ರಸನ್ನ ಪಾಟೀಲ ನಿರೂಪಿಸಿದರು. ಕಿಶೋರಬಾಬು ನಾಗರಕಟ್ಟಿ ಸ್ವಾಗತಿಸಿದರು. ಡಿ.ಎಸ್. ಬಾಪುರಿ ವಂದಿಸಿದರು.
ಕಾರ್ಯಕ್ರಮದಲ್ಲಿ ಚಂದ್ರಶೇಖರ ವಸ್ತ್ರದ, ಅನ್ನದಾನಿ ಹಿರೇಮಠ, ರಾಹುಲ ಗಿಡ್ನಂದಿ, ಶೇಖರಪ್ಪ ಕಳಸಾಪೂರಶೆಟ್ಟರ, ಬಿ.ಎಸ್. ಹಿಂಡಿ, ಬಿ.ಬಿ. ಹೊಳಗುಂದಿ, ಎಂ.ಎಫ್. ದೋಣಿ, ಶೈಲಾ ಗಿಡ್ನಂದಿ, ರಾಜಶೇಖರ ಕರಡಿ, ರತ್ನಕ್ಕ ಪಾಟೀಲ, ಎಸ್.ಎಂ. ಕಾತರಕಿ, ಶಶಿಕಾಂತ ಕೊರ್ಲಹಳ್ಳಿ, ರಾಮಚಂದ್ರ ಮೋನೆ, ಎಸ್.ಎಲ್. ಕುಲಕರ್ಣಿ, ಸಿ.ಎಂ. ಮಾರನಬಸರಿ, ರತ್ನಾಬಾಯಿ ಪುರಂತರ, ಗಿರೀಶ ಪಂತರ, ಗಂಗಮ್ಮ ಮುದಗಲ್, ಜೆ.ಎ. ಪಾಟೀಲ, ರಾಜು ಕಲಬುರ್ಗಿ, ಆನಂದ ಕಲ್ಮಠ, ರಮೇಶ ಹುಲಕುಂದ, ಎಸ್.ಎಸ್. ದೇಶಪಾಂಡೆ, ಎಸ್.ಬಿ. ಹೊಸೂರ, ಉಮಾ ಕಣವಿ, ಸುರೇಶ ಕುಂಬಾರ, ರವಿ ದೇವರಡ್ಡಿ, ಎಸ್.ಎಸ್. ಚಾಟಗೇರಿ, ಎಸ್.ವಿ. ಕುಂದಗೋಳ, ಪಿ.ವಿ. ಇನಾಮದಾರ, ಆರ್.ಬಿ. ಬದಿ, ಜನಕ ಕಲಬುರ್ಗಿ, ನಂದಾ ಎಂ.ಕೆ., ರಾಜೇಶ್ವರಿ ಬಡ್ನಿ, ಮಧುಮತಿ ಮಹಾರಾಜಪೇಟೆ, ಎಸ್.ಬಿ. ಪಾಟೀಲ, ಅನಸೂಯಾ ಮಿಟ್ಟಿ, ಆರ್.ಡಿ. ಕಪ್ಪಲಿ, ಅಮರೇಶ ರಾಂಪೂರ, ಸತೀಶ ಚನ್ನಪ್ಪಗೌಡ್ರ ಮೊದಲಾದವರು ಭಾಗವಹಿಸಿದ್ದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಸಾಪ ಅಧ್ಯಕ್ಷರಾದ ವಿವೇಕಾನಂದಗೌಡ ಪಾಟೀಲ ಮಾತನಾಡಿ, ಕಂಬಾರರು ವಸಾಹತುಶಾಹಿ ವಿರೋಧಿ ನೆಲೆಯ ತಮ್ಮ ನಾಟಕಗಳಿಗೆ ಜನಪದದ ಎಲ್ಲ ಸತ್ವವನ್ನು ತುಂಬಿ ರಂಗಭೂಮಿಗೆ ಹೊಸ ಚೈತನ್ಯವನ್ನು ತಂದರು. ಚಲನಚಿತ್ರ ನಿರ್ದೇಶಕರಾಗಿ, ಹಾಡುಗಾರರಾಗಿ, ಸಂಸ್ಥೆಗಳ ಮುಖ್ಯಸ್ಥರಾಗಿ, ರಾಜಕೀಯ, ಸಾಮಾಜಿಕ ರಂಗದಲ್ಲೂ ವಿಶಿಷ್ಠ ಕೊಡುಗೆಯನ್ನು ನೀಡಿ ಕನ್ನಡ ನೆಲದ ಶ್ರೀಮಂತಿಕೆಗೆ ಕಾರಣರಾಗಿದ್ದಾರೆ ಎಂದು ತಿಳಿಸಿದರು.