ವಿಜಯಸಾಕ್ಷಿ ಸುದ್ದಿ, ಗದಗ: ಸಮಾಜದ ಅಂಕುಡೊಂಕುಗಳನ್ನು ತಿದ್ದಿ, ಭಕ್ತಿ ಮಾರ್ಗದ ಮೂಲಕ ಸಮಸಮಾಜ ನಿರ್ಮಾಣಕ್ಕೆ ಪಣತೊಟ್ಟವರು ಕನಕದಾಸರು. ಕನಕದಾಸರ ತತ್ವ–ಸಿದ್ಧಾಂತಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ಗದಗ ಅನ್ನದಾನೇಶ್ವರ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಎ.ಎಂ. ವಿದ್ಯಾಸಾಗರ ಹೇಳಿದರು.
Advertisement
ಅವರು ಅನ್ನದಾನೇಶ್ವರ ಪದವಿಪೂರ್ವ ಕಾಲೇಜಿನಲ್ಲಿ ಕನಕದಾಸರ ಜಯಂತ್ಯುತ್ಸವದ ಅಂಗವಾಗಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿ, “ಕನಕದಾಸರು ದಾರ್ಶನಿಕರಾಗಿ, ಸಂತರಾಗಿ, ಸಮಾಜ ಚಿಂತಕರಾಗಿ ಆದರ್ಶ ಮಾರ್ಗ ತೋರಿದ್ದಾರೆ. ಅವರ ಮೌಲ್ಯಯುತ ತತ್ವಗಳನ್ನು ಇಂದಿನ ಯುವಕರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು,” ಎಂದರು.
ಉಪನ್ಯಾಸಕರಾದ ಎಸ್.ಎ. ಯಳವತ್ತಿ, ವೆಂಕಟರಾವ್, ಸಿ.ಡಿ. ನದಾಫ್, ಐ.ಎಂ. ಮುಳಗುಂದ, ಲಕ್ಷ್ಮೀ, ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


