HomeGadag Newsಬಾಪೂಜಿ ಶಾಲೆಯಲ್ಲಿ ಕನಕದಾಸ ಜಯಂತಿ

ಬಾಪೂಜಿ ಶಾಲೆಯಲ್ಲಿ ಕನಕದಾಸ ಜಯಂತಿ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ: ಸಮಾನತೆ, ಸಹೋದರತ್ವ, ದೈವಾನ್ವೇಷಣೆ ಮತ್ತು ದೈವದ ಜೊತೆ ಸಂವಾದದ ಮಾರ್ಗವನ್ನೂ ಬೋಧಿಸಿದ ವಿಶ್ವಚೇತನ, ದಾಸಶ್ರೇಷ್ಠ ಭಕ್ತ ಕನಕದಾಸರ 538ನೇ ಜಯಂತಿಯನ್ನು ಇಲ್ಲಿಯ ಲಕ್ಕುಂಡಿ ಗ್ರಾಮೀಣ ವಿದ್ಯಾವರ್ಧಕ ಸಂಸ್ಥೆಯ ಬಾಪೂಜಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸಡಗರ ಸಂಭ್ರಮದಿಂದ ಆಚರಿಸಲಾಯಿತು.

5ನೇ ತರಗತಿ ವಿದ್ಯಾರ್ಥಿ ಸಮರ್ಥ ಗರ್ಜಪ್ಪನವರ ಧರಿಸಿದ್ದ ಕನಕದಾಸರ ವೇಷ-ಭೂಷಣವು ಆಕರ್ಷಿಸಿತು. ವಿದ್ಯಾರ್ಥಿಗಳು ಕನಕದಾಸರ ಕೀರ್ತನೆಗಳನ್ನು ಹೇಳಿದರು. ಪ್ರಧಾನ ಗುರುಮಾತೆ ಆರ್.ಬಿ. ಬರದ್ವಾಡ, ಹಿರಿಯ ಶಿಕ್ಷಕ ಬಸವರಾಜ ಆಯ್. ಗರ್ಜಪ್ಪನವರ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಂ 1ರ ವ್ಯವಸ್ಥಾಪಕ ಶರಣಪ್ಪ ಗರ್ಜಪ್ಪನವರ, ರಫೀಯಾ ದಂಡಿನ, ಪಿ.ಬಿ. ಬರದ್ವಾಡ, ಎ.ಎಂ. ದಂಡಿನ, ಲಕ್ಷ್ಮೀ ಗರ್ಜಪ್ಪನವರ, ಅರ್ಜುನ ಛಲವಾದಿ, ಅಂಬುಜಾ ಕುಲಕರ್ಣಿ ಇದ್ದರು.

ಗ್ರಾಮ ಪಂಚಾಯಿತಿ, ಬಾಲಕಿಯರ ಸರಕಾರಿ ಪ್ರೌಢಶಾಲೆ, ಸರಕಾರಿ ಪ್ರಾಥಮಿಕ ದ್ವಿಭಾಷಾ ಶಾಲೆ, ಸರಕಾರಿ ಹಿರಿಯ ಕನ್ನಡ ಹೆಣ್ಣುಮಕ್ಕಳ ಶಾಲೆ, ಸರಕಾರಿ ಪ್ರಾಥಮಿಕ ಉರ್ದು ಶಾಲೆ, ಸರಕಾರಿ ಕಿರಿಯ ಪ್ರಾಥಮಿಕ ಶಾಲೆ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಾರುತಿ ನಗರ, ಬಿ.ಎಚ್. ಪಾಟೀಲ ಪ್ರೌಢಶಾಲೆ, ಸ್ವಾಮಿ ವಿವೇಕಾನಂದ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಕನಕದಾಸರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಜಯಂತಿಯನ್ನು ಆಚರಿಸಲಾಯಿತು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!