ವಿಜಯಸಾಕ್ಷಿ ಸುದ್ದಿ, ಮುಳಗುಂದ: ಮೌಲ್ಯಗಳಿಂದ ಬದುಕಿದ ಕನಕದಾಸರು ಇಂದಿಗೂ ಪ್ರಸ್ತುತರಾಗಿದ್ದಾರೆ ಎಂದು ಶಿಕ್ಷಕಿ ತ್ರಿವೇಣಿ ಬಡ್ನಿ ಹೇಳಿದರು.
Advertisement
ಪಟ್ಟಣದ ಸರಕಾರಿ ಮಾದರಿ ಕನ್ನಡ ಗಂಡು ಮಕ್ಕಳ ಶಾಲೆ ನಂ. 1ರಲ್ಲಿ ಭಕ್ತ ಕನಕದಾಸರ ಜಯಂತ್ಯುತ್ಸವದ ಅಂಗವಾಗಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.
“ನಾಡಿನ ಸಂತರು, ಶರಣರು, ದಾರ್ಶನಿಕರ ಸಂದೇಶಗಳು ನಮ್ಮ ಜೀವನಕ್ಕೆ ದಾರಿದೀಪವಾಗಿವೆ. ಭಕ್ತ ಕನಕದಾಸರು ಸಮಾಜ ಸುಧಾರಣೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಅವರ ತತ್ವ–ಸಿದ್ಧಾಂತಗಳು ನಮಗೆಲ್ಲರಿಗೂ ಮಾದರಿಯಾಗಿವೆ,” ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಎಚ್.ಆರ್. ಭಜಂತ್ರಿ, ಕೆ.ಎಂ. ಹೆರಕಲ್ಲ, ಎಸ್.ಡಿ. ಪಂಡಿತ, ಕವಿತಾ ಬಿನ್ನಾಳ, ಶಭಾನಾ ಢಾಲಾಯತ ಇದ್ದರು.


